
ಬೆಂಗಳೂರಲ್ಲಿ ಭೀಕರ MURDER – ಕೆಲಸದ ವಿಚಾರವಾಗಿ ಬಿಹಾರ್ ಮೂಲದ ಯುವಕನ ಹತ್ಯೆ!
ಚನ್ನಪಟ್ಟಣ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಬಿಹಾರ ಮೂಲದ ಯುವಕನೋರ್ವನನ್ನು ಆತನೊಂದಿಗೆ ಕೆಲಸ ಮಾಡುತ್ತಿದ್ದವರೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆಯಾದ ಯುವಕನನ್ನು ಅಂಕಿತ್ (24) ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕಾಗಿ ಅಂಕಿತ್ ಸೇರಿದಂತೆ ಮೂವರು ಯುವಕರು ವಾರದ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.
READ THIS : ಡಿವೋರ್ಸ್ ಕೇಳಿದ್ದಕ್ಕೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಮರ್ಡರ್!

ಬೆಂಗಳೂರಲ್ಲಿ ಭೀಕರ ಮರ್ಡರ್
ಕೆಲಸದ ವಿಚಾರವಾಗಿ ಮೂವರ ನಡುವೆ ಆರಂಭವಾದ ಸಣ್ಣ ವಾಗ್ವಾದ, ಬಳಿಕ ಮದ್ಯಪಾನ ಮಾಡಿದ ವೇಳೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಉಂಟಾದ ಗಲಾಟೆಯಲ್ಲಿ ಅಂಕಿತ್ ಮೇಲೆ ಹಲ್ಲೆ ನಡೆಸಲಾಗಿದ್ದು, ಆತ ಮೃತಪಟ್ಟಿದ್ದಾನೆ. ಘಟನೆ ಬಳಿಕ ಅಂಕಿತ್ ಜೊತೆಯಿದ್ದ ರಾಜು ಹಾಗೂ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MURDER ಗೆ ಕಾರಣವೇನು?
ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಘಟನೆಗೆ ನಿಖರ ಕಾರಣ ಹಾಗೂ ಹತ್ಯೆಯ ಹಿನ್ನೆಲೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

MUST WATCH : ತುಮಕೂರಿಗೆ ನೀರು ಹರಿಸಲು ಒತ್ತಾಯ..! – ಬರದ ನಾಡಿಗೆ ಹರಿಯುತ್ತಾ ಭದ್ರ ನೀರು..?




