ನೂತನ ಸಚಿವರಿಗೆ ಇವತ್ತೇ ಖಾತೆ ಹಂಚಿಕೆ ಮಾಡುತ್ತೇವೆ – CM ಡಿಕೆ ಶಿವಕುಮಾರ್ ಹೇಳಿಕೆ

ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಸಂಜೆ ವೇಳೆಗೆ ನೂತನ ಸಚಿವರಿಗೆ ಹಂಚಿಕೆಯಾಗುವ ಖಾತೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನೂತನ ಸಚಿವರಿಗೆ ಯಾವೆಲ್ಲ ಖಾತೆಗಳು ಸಿಗಲಿವೆ
ಹೀಗಾಗಿ ರಾಜ್ಯದ ನೂತನ ಸಚಿವರಿಗೆ ಯಾವೆಲ್ಲ ಖಾತೆಗಳು ಸಿಗಲಿವೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಕುರಿತು ಹಲವು ಚರ್ಚೆಗಳು ನಡೆಯುತ್ತಿರುವ ನಡುವೆಯೇ CM ಡಿ.ಕೆ. ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ : CM ಡಿಕೆಶಿಗೆ ಮುಗಿಯದ ಖಾತೆ ಹಂಚಿಕೆ ಸಂಕಷ್ಟ.!

ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರೈತರ ಹಿತವೇ ಮುಖ್ಯ
ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ನೀಡಿರುವ ಸೂಚನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ ಒಳಹರಿವಿ ಗಮನಿಸುತ್ತೇವೆ. ನಾವು ರೈತರ ಹಿತ ಕಾಪಾಡಬೇಕು. ಕೋರ್ಟ್ ಆದೇಶ ಪಾಲಿಸಬೇಕು.
ರಾಜಕಾರಣ ಮಾಡಲು ಆಗಲ್ಲ
ನೀರಾವರಿ ಸಚಿವರ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳೆ ಉಳಿಸಬೇಕಾಗಿದೆ. ನೀರಿನ ಲಭ್ಯತೆ ಗಮನಿಸಿ ತೀರ್ಮಾನ ಮಾಡ್ತೇವೆ. ನಾನು ನೀರಾವರಿ ವಿಚಾರದಲ್ಲಿ ಬಹಳ ಪಾರದರ್ಶಕವಾಗಿದ್ದೇನೆ. ರಾಜಕಾರಣ ಮಾಡಲು ಆಗಲ್ಲ. ನಾವು ರೈತರನ್ನು ಬದುಕಿಸುತ್ತೇವೆ. ತಾಳ್ಮೆಯಿಂದ ಇರಿ. ಪ್ರಕೃತಿ ನಮ್ಮನ್ನು ಉಳಿಸುತ್ತದೆ ಎಂದರು.

ಇದನ್ನು ನೋಡಿ : ರಾತ್ರಿ ವೇಳೆ JCB, TRACTOR ಘರ್ಜನೆ – ಕೆರೆಯ ಮಣ್ಣನ್ನು ಲೂಟಿ ಮಾಡ್ತಿದ್ದಾರೆ ಕಳ್ಳರು




