Sira ದಲ್ಲಿ ಜೆಡಿಎಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರ ಮುಸುಕಿನ ಗುದ್ದಾಟ.!

Sira ಜೆಡಿಎಸ್ನಲ್ಲಿ ಇದೀಗ ‘ಮನೆಯೊಂದು ಮೂರು ಬಾಗಿಲು’ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಬೆಂಬಲಿಗರ ನಡುವೆಯೇ ನಡೆಯುತ್ತಿರುವ ಪೋಸ್ಟ್ಗಳು ಹಾಗೂ ಕಮೆಂಟ್ಗಳು ಇದೀಗ ಕುತೂಹಲಕ್ಕೆ ಕಾರಣವಾಗಿವೆ.
Sira ಜೆಡಿಎಸ್ನಲ್ಲಿ ಭಿನ್ನಾಭಿಪ್ರಾಯದ ಚರ್ಚೆ.!
ಒಬ್ಬರ ಪೋಸ್ಟ್ಗೆ ಮತ್ತೊಬ್ಬರ ಕಮೆಂಟ್ ಮೂಲಕ ಪರೋಕ್ಷವಾಗಿ ತಿರುಗೇಟು ನೀಡುತ್ತಿರುವ ಬೆಳವಣಿಗೆಗಳು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಹಿಂಬಾಲಕರ ಪೋಸ್ಟ್ಗಳು ಹಾಗೂ ಪ್ರತಿಕ್ರಿಯೆಗಳು ಇದೀಗ ರಾಜಕೀಯ ಚರ್ಚೆಯ ವಿಷಯವಾಗಿವೆ. ನೇರವಾಗಿ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟೀಕೆ–ಪ್ರತಿಟೀಕೆ ನಡೆಸುತ್ತಿರುವುದು, ಜೆಡಿಎಸ್ನಲ್ಲಿ ಎಲ್ಲವೂ ಸರಿಯಾಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಈ ಬೆಳವಣಿಗೆಗಳ ಕುರಿತು ಶಿರಾ ಜೆಡಿಎಸ್ನ ಮುಖಂಡರು ಅಧಿಕೃತವಾಗಿ ಏನಾದರೂ ಸ್ಪಷ್ಟನೆ ನೀಡುತ್ತಾರಾ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ : ನೂತನ ಸಚಿವರಿಗೆ ಇವತ್ತೇ ಖಾತೆ ಹಂಚಿಕೆ ಮಾಡುತ್ತೇವೆ

ಸೋಶಿಯಲ್ ಮೀಡಿಯಾದಲ್ಲೇ ಶುರುವಾಯ್ತಾ ವಾರ್.?
ಇನ್ನು ಸಾಮಾಜಿಕ ಜಾಲತಾಣದ ಈ ಮುಸುಕಿನ ಗುದ್ದಾಟ ಮುಂದಿನ ದಿನಗಳಲ್ಲಿ ಬಹಿರಂಗ ಸಮರಕ್ಕೆ ತಿರುಗುತ್ತಾ? ಅಥವಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಗೆ ಮಾತುಕತೆಯ ಮೂಲಕವೇ ತೆರೆ ಬೀಳುತ್ತಾ? ಅನ್ನೋ ಪ್ರಶ್ನೆ ಇದೀಗ ಶಿರಾ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಒಟ್ನಲ್ಲಿ, ಚುನಾವಣೆಗೆ ಇನ್ನೂ ಸಮಯವಿದ್ದರೂ ಶಿರಾ ಜೆಡಿಎಸ್ನೊಳಗಿನ ಬೆಳವಣಿಗೆಗಳು ರಾಜಕೀಯ ಕುತೂಹಲ ಮೂಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಯಾವ ರೀತಿ ಬೀರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
MUST WATCH : ಖಾತೆ ಹಂಚಿಕೆ ಬೀದಿ ರಂಪ ಆಗ್ತಿದೆ – ಹೀಗ್ಯಾಕಂದ್ರು ಶಾಸಕ SURESH BABU




