ಕಾಟಚಾರಕ್ಕೆ ಕೆಲಸ ಮಾಡ್ತೀರಾ ಅಧಿಕಾರಿಗಳಿಗೆ DCM ಹಿಗ್ಗಾಮುಗ್ಗಾ ಕ್ಲಾಸ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಆವರಿಸಿದ್ದು, ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಪರಂ ಹಿಗ್ಗಾಮುಗ್ಗಾ ಕ್ಲಾಸ್
ಇತ್ತ ತುಮಕೂರು ಜಿಲ್ಲಾಯಾದ್ಯಂತ ಬರಗಾಲದ ಛಾಯೆ ಆವರಿಸಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ತುಮಕೂರು ಜಿಲ್ಲೆಯಾದ್ಯಂತ DCM ಪರಮೇಶ್ವರ್ ಬರ ವೀಕ್ಷಣೆ ಮಾಡ್ತಾ ಇದ್ದಾರೆ. ಇಂದು ಗುಬ್ಬಿ ತಾಲೂಕಿನ ಸಿ.ಎಸ್ ಪುರ ಹೋಬಳಿಯ ಯಡವನಹಳ್ಳಿಯಲ್ಲಿ ಡಿಸಿಎಂ ಪರಂ ಬರ ವೀಕ್ಷಣೆ ಮಾಡುವ ವೇಳೆ, ಅಧಿಕಾರಿಗಳಿಗೆ ಪರಂ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.
ಇದನ್ನು ಓದಿ : Ballari ಫೈರಿಂಗ್ ಕೇಸ್ CID ತನಿಖೆಗೆ ..? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

ಕಳಪೆ ಗುಣಮಟ್ಟದ ಪೈಪು, ನಲ್ಲಿಗಳನ್ನು ಕಂಡು ಫುಲ್ ಗರಂ
ಹೌದು, ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಯಡವನಹಳ್ಳಿಯಲ್ಲಿ ಅಳವಡಿಸಿದ್ದ ಕಳಪೆ ಗುಣಮಟ್ಟದ ಪೈಪು ಹಾಗೂ ನಲ್ಲಿಗಳನ್ನು ಡಿಸಿಎಂ ಪರಂ ಕಂಡು ಫುಲ್ ಗರಂ ಆದ್ರು. ಏನ್ ಕಾಟಚಾರಕ್ಕೆ ಕೆಲಸ ಮಾಡ್ತಿರಾ ಎಂದು ಪರಂ ಪ್ರಶ್ನಿಸಿದ್ರು. ಕಥೆ ಎಲ್ಲಾ ಹೇಳಬೇಡ, ಡೊಂಟ್ ಡು ಸಚ್ ಥಿಂಗ್ಸ್. ಈ ಪೈಪನ್ನು ಆಟವಾಡುವ ಹುಡುಗರು ಕಿತ್ತಾಕುತ್ತಾರೆ ಎನ್ನುತ್ತಾ, ಕಮಿಷನ್ ದಂಧೆ ಬಗ್ಗೆ ಪರಂ ಅನುಮಾನ ವ್ಯಕ್ತಪಡಿಸಿದರು.
ಕೂಡಲೇ ಗುಣಮಟ್ಟದ ಪೈಪ್,ನಲ್ಲಿ ಹಾಕಲು DCM ಸೂಚನೆ
ಇನ್ನು ಕಳಪೆ ಗುಣಮಟ್ಟದ ಕಾಮಗಾರಿಗೆ ಅಸಮಾಧಾನ ವ್ಯಕ್ತವಾಗಿದ್ದು, ಕೂಡಲೇ ಗುಣಮಟ್ಟದ ಪೈಪ್ ಹಾಗೂ ನಲ್ಲಿ ಹಾಕಲು ಶಾಸಕ M.T ಕೃಷ್ಣಪ್ಪ ಹಾಗೂ ಡಿಸಿ.ಎಂ ಪರಮೇಶ್ವರ್ ಅಧಿಕಾರಿಗೆ ಸೂಚನೆ ನೀಡಿದರು.

ಇದನ್ನು ನೋಡಿ : ಖಾತೆ ಹಂಚಿಕೆ ಬೀದಿ ರಂಪ ಆಗ್ತಿದೆ – ಹೀಗ್ಯಾಕಂದ್ರು ಶಾಸಕ SURESH BABU




