ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ Toxic ಚಿತ್ರಕ್ಕೆ 1ನೇ ಸ್ಥಾನ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಯಾಗುವ ಮುನ್ನವೇ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಸೋಶಿಯಲ್ ಮಿಡಿಯಾಗಳಲ್ಲಿ ಚಿತ್ರದ ಕುರಿತು ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದ್ದರೂ, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆ ಮಾತ್ರ ಕಡಿಮೆಯಾಗಿಲ್ಲ.
ಐಎಂಡಿಬಿ ಪಟ್ಟಿಯಲ್ಲಿ ಯಶ್ ಸಾಮ್ರಾಜ್ಯ
ಹೌದು.. ಇತ್ತೀಚೆಗೆ ಬಿಡುಗಡೆಯಾದ ಐಎಂಡಿಬಿಯ ಭಾರತದ ಅತ್ಯಂತ ನಿರೀಕ್ಷಿತ ಹೊಸ ಸಿನಿಮಾಗಳ ರಿಯಲ್-ಟೈಮ್ ಜನಪ್ರಿಯತೆ ಪಟ್ಟಿಯಲ್ಲಿ ‘ಟಾಕ್ಸಿಕ್’ ಮೊದಲ ಸ್ಥಾನ ಪಡೆದುಕೊಂಡಿದೆ.
ಈ ಪಟ್ಟಿಯಲ್ಲಿ ಸಿನಿಮಾ ಸುಮಾರು 47% ಮತಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದು, ಉಳಿದ ಸಿನಿಮಾಗಳಿಗಿಂತ ಗಮನಾರ್ಹ ಮುನ್ನಡೆ ಸಾಧಿಸಿದೆ.

ಎರಡನೇ ಸ್ಥಾನದಲ್ಲಿ ಜನನಾಯಗನ್
ಇನ್ನು ಎರಡನೇ ಸ್ಥಾನದಲ್ಲಿ ತಮಿಳು ನಟ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ 12.7% ಮತಗಳನ್ನು ಪಡೆದಿದೆ.
ಇದರೊಂದಿಗೆ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮೇಲಿನ ನಿರೀಕ್ಷೆ ದೇಶದಾದ್ಯಂತ ಎಷ್ಟರ ಮಟ್ಟಿಗೆ ಇದೆ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ : Toxic ಬಗ್ಗೆ ಅಪ್ಡೇಟ್ ಕೇಳ್ತಿದ್ದವರಿಗೆ ಚಿತ್ರತಂಡ ಸರ್ಪ್ರೈಸ್

ಈ ಸಿನಿಮಾ ಕೊನೆಯ ಸ್ಥಾನದಲ್ಲಿ
ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ‘ಆವಾರಾಪನ್ 2’ (9.4%), ನಾಲ್ಕನೇ ಸ್ಥಾನದಲ್ಲಿ ‘ಇಂದ್ರಜಾಲ್’ (9.1%), ಐದನೇ ಸ್ಥಾನದಲ್ಲಿ ಲೋಕೇಶ್ ಕನಕರಾಜ್ ಅಭಿನಯದ ‘ಡಿಸಿ’ (7.4%) ಚಿತ್ರಗಳಿವೆ.
ಶ್ರದ್ಧಾ ಕಪೂರ್ ಅಭಿನಯದ ‘ಈಥಾ’, ಸೂರ್ಯ ನಟನೆಯ ‘ವಿಶ್ವನಾಥ್ ಅಂಡ್ ಸನ್ಸ್’ ಹಾಗೂ ‘ಮಿರ್ಜಾಪುರ್: ದಿ ಮೂವಿ’ ಸೇರಿದಂತೆ ಇತರೆ ಸಿನಿಮಾಗಳು ಮೂರು ಶೇಕಡಾಕ್ಕಿಂತ ಕಡಿಮೆ ಮತಗಳನ್ನು ಪಡೆದು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಭಾರತೀಯ ಚಿತ್ರರಂಗದ ಅತಿ ನಿರೀಕ್ಷಿತ ಸಿನಿಮಾ ಆದ Toxic
‘ಟಾಕ್ಸಿಕ್’ ಚಿತ್ರದ ಕುರಿತು ಹಲವು ವದಂತಿಗಳು ಮತ್ತು ನೆಗೆಟಿವ್ ಸುದ್ದಿಗಳು ಹರಿದಾಡುತ್ತಿದ್ದರೂ, ಅವು ಚಿತ್ರದ ಜನಪ್ರಿಯತೆಗೆ ಯಾವುದೇ ಧಕ್ಕೆ ತರಲಿಲ್ಲ ಎನ್ನುವುದು ಈ ಪಟ್ಟಿಯಿಂದ ಸ್ಪಷ್ಟವಾಗಿದೆ.
ಚಿತ್ರದ ಬಿಡುಗಡೆಯ ಮುನ್ನವೇ ಇಂತಹ ಭರ್ಜರಿ ಪ್ರತಿಕ್ರಿಯೆ ಸಿಕ್ಕಿರುವುದು ಯಶ್ ಅವರ ಪ್ಯಾನ್-ಇಂಡಿಯಾ ಹಾಗೂ ಜಾಗತಿಕ ಮಟ್ಟದ ಅಭಿಮಾನಿ ಬಳಗದ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಆ್ಯಕ್ಷನ್ ಎಂಟರ್ಟೈನರ್ ಚಿತ್ರದ ಮೂಲಕ ಯಶ್ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

ಇದನ್ನು ನೋಡಿ : ಕರ್ಬೂಜ ತಿಂದು 30ಕ್ಕೂ ಹೆಚ್ಚು ಕುರಿಗಳ ಸಾ* – ಕುರಿ ಕಳೆದುಕೊಂಡು ರೈತ ಕಂಗಾಲು



