ಬಂಗಾರ ಪ್ರಿಯರಿಗೆ ಮತ್ತೆ ಸಂತಸದ ಸುದ್ದಿ! ದೇಶದ ಪ್ರಮುಖ ನಗರಗಳ Gold Rate ಇಂದು ಎಷ್ಟು ಗೊತ್ತಾ?

ಜಾಗತಿಕ ಮಟ್ಟದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಬೆಳವಣಿಗೆಗಳಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು (ಜುಲೈ 14, 2026) ಸ್ವಲ್ಪ ಇಳಿಕೆ ಕಂಡುಬಂದಿದೆ. ಮತ್ತೊಂದೆಡೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ.
24 ಕ್ಯಾರೆಟ್ ಚಿನ್ನದ ದರ
ಇಂದಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ಬೆಲೆ ₹11 ಇಳಿಕೆಯಾಗಿ ₹14,280ಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ₹110 ಇಳಿಕೆಯಾಗಿ ₹1,42,800 ಆಗಿದೆ.
22 ಕ್ಯಾರೆಟ್ Gold Rate
22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ₹10 ಇಳಿಕೆಯಾಗಿ ₹13,090 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹100 ಇಳಿಕೆಯಾಗಿ ₹1,30,900ಕ್ಕೆ ತಲುಪಿದೆ.

ಇದನ್ನು ಓದಿ : ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ – ಗ್ರಾಮ್ಗೆ 130 ರೂ ಕುಸಿತ
ಬೆಂಗಳೂರಲ್ಲಿ Gold Rate ಏಷ್ಟಿದೆ?
- 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,280
- 22 ಕ್ಯಾರೆಟ್ ಚಿನ್ನ (1 ಗ್ರಾಂ): ₹13,090
- ಬೆಳ್ಳಿ (1 ಗ್ರಾಂ): ₹235
- ಬೆಳ್ಳಿ (1 ಕೆಜಿ): ₹2,35,000
ಬೆಳ್ಳಿ ದರ
ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ ₹235 ಹಾಗೂ ಪ್ರತಿ ಕೆಜಿ ಬೆಳ್ಳಿ ₹2,35,000 ದರದಲ್ಲಿ ಸ್ಥಿರವಾಗಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ–ಇರಾನ್ ಉದ್ವಿಗ್ನತೆ, ಹಾರ್ಮುಜ್ ಜಲಸಂಧಿಯಲ್ಲಿನ ಬೆಳವಣಿಗೆಗಳು ಹಾಗೂ ಆರ್ಥಿಕ ಅನಿಶ್ಚಿತತೆಗಳು ಸರಕು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದ್ದು, ಹೂಡಿಕೆದಾರರು ಚಿನ್ನ ಮತ್ತು ತೈಲದ ಬೆಲೆಗಳ ಮೇಲಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.
ಇದನ್ನು ನೋಡಿ : ಸರ್ವೇಗೆ ಬಂದ ಅಧಿಕಾರಿಗಳಿಗೆ ಪೊರಕೆ ಸೇವೆ – ಪೊಲೀಸರು ಇದ್ರು ಡೋಂಟ್ ಕೇರ್ ಎಂದ ರೈತರು





