
ನಟ Duniya Vijay -ನಾಗರತ್ನ ದಾಂಪತ್ಯ ಅಂತ್ಯ – ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್!
ಸ್ಯಾಂಡಲ್ವುಡ್ ನಟ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ಸುದೀರ್ಘ ದಾಂಪತ್ಯ ಜೀವನಕ್ಕೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ಇಬ್ಬರ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ವಿಚ್ಛೇದನ ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ದುನಿಯಾ ವಿಜಯ್ -ನಾಗರತ್ನ ದಾಂಪತ್ಯ ಅಂತ್ಯ
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಶಾಂತಿಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಹಲವು ವರ್ಷಗಳಿಂದ ಕಾನೂನು ಹೋರಾಟದಲ್ಲಿದ್ದ ದಂಪತಿಗೆ ಇದೀಗ ನ್ಯಾಯಾಲಯದ ಆದೇಶದ ಮೂಲಕ ಅಧಿಕೃತವಾಗಿ ವಿಚ್ಛೇದನ ದೊರೆತಂತಾಗಿದೆ.

READ THIS : ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ ದಂಪತಿ
ನಾಗರತ್ನಗೆ ₹2 ಕೋಟಿ ಜೀವನಾಂಶ
ವಿಚ್ಛೇದನ ಮಂಜೂರು ಮಾಡುವುದರ ಜೊತೆಗೆ ಪತ್ನಿ ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ಪಾವತಿಸುವಂತೆ ನಟ ದುನಿಯಾ ವಿಜಯ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಜಯ್ ಅವರ ಸಾಮಾಜಿಕ ಸ್ಥಾನಮಾನ, ಆದಾಯ ಹಾಗೂ ಪ್ರಸ್ತುತ ಹಣಕಾಸಿನ ಸ್ಥಿತಿಗತಿಗಳನ್ನು ಪರಿಗಣಿಸಿ ಜೀವನಾಂಶದ ಮೊತ್ತವನ್ನು ನ್ಯಾಯಪೀಠ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. ಪತ್ನಿಯ ಭವಿಷ್ಯದ ಜೀವನ ಹಾಗೂ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮೊತ್ತವನ್ನು ನಿಗದಿಪಡಿಸಲಾಗಿದೆ.

Duniya Vijay – ಹಲವು ವರ್ಷಗಳ ಕಾನೂನು ಹೋರಾಟಕ್ಕೆ ತೆರೆ
Duniya Vijay ಮತ್ತು ನಾಗರತ್ನ ಅವರ ದಾಂಪತ್ಯ ಸಂಬಂಧ ಹಲವು ವರ್ಷಗಳಿಂದ ವಿವಾದ ಹಾಗೂ ಕಾನೂನು ಪ್ರಕ್ರಿಯೆಯಲ್ಲಿತ್ತು. ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವಿವಿಧ ಹಂತಗಳಲ್ಲಿ ಮುಂದುವರಿದಿತ್ತು. ಇದೀಗ ಹೈಕೋರ್ಟ್ ನೀಡಿರುವ ಆದೇಶದೊಂದಿಗೆ ಈ ದೀರ್ಘಕಾಲದ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.
MUST WATCH : ಬಾಡಿಗೆ ಮನೆಯಲ್ಲಿ ವೇ*ವಾಟಿಕೆ ದಂಧೆ – ಮಹಿಳೆಯರು ಸೇರಿ ಮೂವರು ಅರೆಸ್ಟ್.





