ಸ್ಯಾಂಡಲ್ವುಡ್ ನಟಿ Shubha Poonja ದಾಂಪತ್ಯದಲ್ಲಿ ಬಿರುಕು!? ಡಿವೋರ್ಸ್ಗೆ ಅಪ್ಲೈ ಮಾಡಿದ್ರಾ ನಟಿ?

ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ (Shubha Poonja) ಮತ್ತು ಅವರ ಪತಿ ಸುಮಂತ್ ಬಿಲ್ಲವ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ದಂಪತಿ ನಿರ್ಧರಿಸಿದ್ದಾರೆ.

ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಅವರು ಜನವರಿ 5, 2022ರಲ್ಲಿ ಸುಮಂತ್ ಬಿಲ್ಲವ ಅವರ ಕೈ ಹಿಡಿದಿದ್ದರು. ಉದ್ಯಮಿ ಸುಮಂತ್ ಬಿಲ್ಲವ ಅವರು ಶುಭಾ ಪೂಂಜಾ ಅವರ ಬಹುಕಾಲದ ಗೆಳೆಯನಾಗಿದ್ದು, ಇಬ್ಬರು ಪ್ರೀತಿಸಿ ಮದುವೆ ಆಗಿದ್ರು. ಮದುವೆಯಾಗಿ ನಾಲ್ಕೇ ವರ್ಷಕ್ಕೆ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನು ಓದಿ : ನಟಿ ರುಕ್ಮಿಣಿ ವಸಂತ್ ಡೀಪ್ಫೇಕ್ ಪ್ರಕರಣ – 29 ಅಕೌಂಟ್ಗಳ ವಿರುದ್ಧ FIR!

ವಿಚ್ಛೇದನಕ್ಕೆ ಅಸಲಿ ಕಾರಣವೇನು?
ಕೋರ್ಟ್ ಪ್ರಕ್ರಿಯೆಯ ಭಾಗವಾಗಿ ಇಂದು ಅಥವಾ ಮುಂದಿನ ವಿಚಾರಣೆಯ ದಿನ ದಂಪತಿ ಖುದ್ದಾಗಿ ಫ್ಯಾಮಿಲಿ ಕೋರ್ಟ್ಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮಾಧ್ಯಮಗಳು ಸಂಪರ್ಕಿಸಿದಾಗ, ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಲು ಸುಮಂತ್ ಬಿಲ್ಲವ ನಿರಾಕರಿಸಿದ್ದು, ತಮ್ಮ ವೈಯಕ್ತಿಕ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ಅಭಿಮಾನಿಗಳಲ್ಲಿ ತೀವ್ರ ಆಶ್ಚರ್ಯ
ಮೊಗ್ಗಿನ ಮನಸ್ಸು ಮತ್ತು ಚಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಶುಭಾ ಪೂಂಜಾ, ಬಿಗ್ ಬಾಸದ ಮೂಲಕವೂ ಜನಪ್ರಿಯತೆ ಗಳಿಸಿದ್ದರು. ಶುಭಾ ಪೂಂಜಾ ಅವರ ಈ ಹಠಾತ್ ನಿರ್ಧಾರ ಸ್ಯಾಂಡಲ್ವುಡ್ ವಲಯದಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





