ಸ್ವರ್ಣ ಪ್ರಿಯರಿಗೆ ಶಾಕ್; Gold Rate ನಲ್ಲಿಂದು ಭಾರೀ ಏರಿಕೆ

ನಿನ್ನೆಯಷ್ಟೇ ಕೊಂಚ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ಬರೋಬ್ಬರಿ ₹305 ಏರಿಕೆಯಾಗಿದ್ದು, ₹14,240ಕ್ಕೆ ತಲುಪಿದೆ. ಇದೇ ವೇಳೆ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹333 ಹೆಚ್ಚಳವಾಗಿ ₹15,535ಕ್ಕೆ ಏರಿಕೆಯಾಗಿದೆ.
22 ಕ್ಯಾರಟ್ ಚಿನ್ನದ ದರ ಎಷ್ಟು?
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹14,240 ಇದೆ. ಹೀಗಾಗಿ 8 ಗ್ರಾಂ ಚಿನ್ನಕ್ಕೆ ₹1,13,920, 10 ಗ್ರಾಂಗೆ ₹1,42,400 ಹಾಗೂ 100 ಗ್ರಾಂ ಚಿನ್ನಕ್ಕೆ ₹14,24,000 ಪಾವತಿಸಬೇಕಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ
24 ಕ್ಯಾರಟ್ ಚಿನ್ನದ ದರದಲ್ಲೂ ಗಮನಾರ್ಹ ಏರಿಕೆಯಾಗಿದೆ. ಪ್ರತಿ ಗ್ರಾಂಗೆ ₹15,535 ಇದ್ದು, 8 ಗ್ರಾಂ ಚಿನ್ನದ ಬೆಲೆ ₹1,24,280 ಆಗಿದೆ. 10 ಗ್ರಾಂ ಚಿನ್ನಕ್ಕೆ ₹1,55,350 ಹಾಗೂ 100 ಗ್ರಾಂ ಚಿನ್ನಕ್ಕೆ ₹15,53,500 ಪಾವತಿಸಬೇಕಾಗುತ್ತದೆ.
RAED THIS : ಚಿನ್ನದ ದರದಲ್ಲಿಂದು ಕೊಂಚ ಏರಿಕೆ – ಬೆಲೆ ಇಲ್ಲಿದೆ ನೋಡಿ

ವಿವಿಧ ನಗರಗಳಲ್ಲೂ ಒಂದೇ ದರ
ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ದರ ಬಹುತೇಕ ಒಂದೇ ರೀತಿಯಲ್ಲಿದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹14,240 | ₹15,535 |
| ಮುಂಬೈ | ₹14,240 | ₹15,535 |
| ದೆಹಲಿ | ₹14,240 | ₹15,535 |
| ಕೋಲ್ಕತಾ | ₹14,240 | ₹15,535 |
| ಹೈದರಾಬಾದ್ | ₹14,240 | ₹15,535 |

ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಚಿನ್ನದ ದರ ಏರಿಕೆಯಾಗಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಇಂದು 1 ಗ್ರಾಂ ಬೆಳ್ಳಿಯ ಬೆಲೆ ₹250 ಇದೆ. 10 ಗ್ರಾಂ ಬೆಳ್ಳಿಗೆ ₹2,500 ಹಾಗೂ 1 ಕೆಜಿ ಬೆಳ್ಳಿಗೆ ₹2,50,000 ಪಾವತಿಸಬೇಕಾಗಿದೆ.
MUST WATCH : ಅಕ್ರಮ ಬಾಂಗ್ಲಾ ವಲಸಿಗರಿಗೆ ಗೇಟ್ ಪಾಸ್ – ಬಾಂಗ್ಲಾ ಗಡಿಗೆ ಬಿಟ್ಟುಬಂದ ಪೊಲೀಸರು




