ಡೈರೆಕ್ಟರ್ ಬರ್ತ್ಡೇ ದಿನವೇ Toxic ಮೇಕಿಂಗ್ ವಿಡಿಯೋ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್ ಕುರಿತು ಮತ್ತೊಂದು ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಯಶ್ ಅವರ ಮುಂದಿನ ಚಿತ್ರವಾಗಿರುವುದರಿಂದ Toxic ಮೇಲೆ ಸಿನಿಪ್ರಿಯರ ನಿರೀಕ್ಷೆ ದಿನೇದಿನೇ ಹೆಚ್ಚುತ್ತಿದೆ.

ಡೈರೆಕ್ಟರ್ ಬರ್ತ್ಡೇ ದಿನವೇ ‘ಟಾಕ್ಸಿಕ್ ಮೇಕಿಂಗ್’ ವಿಡಿಯೋ ರಿಲೀಸ್
Toxic ಚಿತ್ರದ ಆಕರ್ಷಕ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಇಂದು ನಿರ್ದೇಶಕಿ ಗೀತು ಮೋಹನ್ದಾಸ್ ಹುಟ್ಟುಹಬ್ಬದ ಹಿನ್ನೆಲೆ 1 ನಿಮಿಷ 2 ಸೆಕೆಂಡ್ಗಳ ಮೇಕಿಂಗ್ ಟೀಸರ್ ರಿಲೀಸ್ ಆಗಿದ್ದು, ಈ ವಿಶೇಷ ವಿಡಿಯೋ ಮೂಲಕ ಗೀತು ಮೋಹನ್ದಾಸ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲಾಗಿದೆ.

Toxic ಬಗ್ಗೆ ಅಪ್ಡೇಟ್ ಕೇಳ್ತಿದ್ದವರಿಗೆ ಸರ್ಪ್ರೈಸ್
ಇನ್ನು ಬಿಡುಗಡೆಯಾದ ವಿಡಿಯೋದಲ್ಲಿ ಚಿತ್ರದ ಅದ್ಧೂರಿ ನಿರ್ಮಾಣ, ಭವ್ಯ ಸೆಟ್ಗಳು ಹಾಗೂ ತಾಂತ್ರಿಕ ವೈಭವದ ಕುರಿತು ಸುಳಿವು ನೀಡಲಾಗಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರೀಕರಣದ ಅಂತಿಮ ಹಂತದಲ್ಲಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯತ್ತ ಸಾಗುತ್ತಿದ್ದು, ಟಾಕ್ಸಿಕ್ ಬಗ್ಗೆ ಅಪ್ಡೇಟ್ ಕೇಳ್ತಿದ್ದವರಿಗೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ.
ಇದನ್ನು ಓದಿ : Toxic|ಬೋಲ್ಡ್ ದೃಶ್ಯಗಳ ಬಗ್ಗೆ ಕಿಯಾರಾ ಅಡ್ವಾಣಿ ಮನವಿ..?

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ
ಚಿತ್ರದ ಬೆನ್ನೆಲುಬಾಗಿ ನಿಂತಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಹೊಸ ವಿಡಿಯೋ ಹಂಚಿಕೊಂಡಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಇದನ್ನು ನೋಡಿ : HEMAVATHI LINK CANAL ಮತ್ತೆ ಶುರು – DCM DR.G.PARAMESHWAR ಹೇಳಿಕೆ




