Theft | ಕಾಂಟ್ರಾಕ್ಟರ್ ಮನೆಯಲ್ಲಿ ಕೈಚಳಕ ತೋರಿದ ಕಳ್ಳ ದಂಪತಿ

ಬೆಂಗಳೂರಿನ ಅಮೃತಹಳ್ಳಿ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ 25 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ನೇಪಾಳಿ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಟ್ರಾಕ್ಟರ್ ಮನೆಯಲ್ಲಿ ಕಳ್ಳ ದಂಪತಿ ಕೈಚಳಕ
ನೇಪಾಳ ಮೂಲದ ಪವನ್ ಬಿಸ್ತಾ ಹಾಗೂ ಸೀತಾ ಬಿಸ್ತಾ ಬಂಧಿತ ಆರೋಪಿಗಳಾಗಿದ್ದಾರೆ. ಅಮೃತಹಳ್ಳಿಯ ಕಾಂಟ್ರಾಕ್ಟರ್ ಒಬ್ಬರ ಮನೆಯಲ್ಲಿ ಮನೆ ಕೆಲಸಕ್ಕೆ ಸೇರಿದ್ದ ಈ ದಂಪತಿ ಕೇವಲ ಒಂದು ತಿಂಗಳಲ್ಲೇ ಮನೆಯ ಒಳಗಿನ ಮಾಹಿತಿಯನ್ನು ಕಲೆ ಹಾಕಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಕಳ್ಳತನ ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದ ಆರೋಪಿಗಳು, ಮನೆಯ ಮಾಲೀಕರು ಹಣವನ್ನು ಎಲ್ಲಿ ಇಡುತ್ತಾರೆ ಹಾಗೂ ಕಬೋರ್ಡ್ನ ಕೀ ಎಲ್ಲಿದೆ ಎಂಬುದನ್ನು ಗಮನಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ : ಜೂಮ್ ಆ್ಯಪ್ನಲ್ಲಿ ಕಾರು ಕಳ್ಳತನ ಮಾಡ್ತಿದ್ದ ಕಿರಾತಕ ಅರೆಸ್ಟ್!

5 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ದಂಪತಿ ಪರಾರಿ
ಉದ್ಯಮಿ ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್ನಿಂದ 25 ಲಕ್ಷ ರೂಪಾಯಿ ನಗದು ಡ್ರಾ ಮಾಡಿ ಮನೆಯ ಕಬೋರ್ಡ್ನಲ್ಲಿ ಇಟ್ಟಿದ್ದರು. ಮನೆಯವರು ಇಲ್ಲದ ಸಮಯದಲ್ಲಿ ಕಬೋರ್ಡ್ ತೆರೆದು ಹಣವಿದ್ದ ಬ್ಯಾಗ್ ಸಮೇತ ದಂಪತಿ ಪರಾರಿಯಾಗಿದ್ದರು.
Theft – 25 ಲಕ್ಷ ಹಣ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನು ನೋಡಿ : ಅಪ್ರಾಪ್ತ ಬಾಲಕನಿಗೆ ಕಾರು ಕೊಟ್ಟ ಪೋಷಕರು- ಬೈಕ್ಗೆ ಡಿಕ್ಕಿ ಹೊಡೆದು ಆಕ್ಸಿಡೆಂ*




