Theft : ಜೂಮ್ ಆ್ಯಪ್ನಲ್ಲಿ ಬುಕ್ ಮಾಡಿದ್ದ ಕಾರು ಕಳ್ಳತನ – ನಕಲಿ ಬಾಡಿಗೆದಾರ ಅರೆಸ್ಟ್.

ಜೂಮ್ ಆ್ಯಪ್ನಲ್ಲಿ ಬುಕ್ ಮಾಡಿ ಕಾರು ಕಳ್ಳತನ ( Theft ) ಮಾಡಿದ್ದ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಶೆಲ್ ಶಫೀಕ್ ಬಂಧಿತ ಆರೋಪಿಯಾಗಿದ್ದಾನೆ.
ಕಾರಿನ GPS ತೆಗೆದುಹಾಕಿ ಆರೋಪಿ ಪರಾರಿ
ಸೈಯದ್ ಕದೀರ್ ಎಂಬುವವರ ಸಹೋದರ ಪೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್ನಲ್ಲಿ ಕಾರು ನೋಂದಣಿಯಾಗಿತ್ತು. ಇದೇ ಕಾರನ್ನು ಕಳೆದ ಏಪ್ರಿಲ್ 22ರಂದು ಮಿಶೆಲ್ ಶಫೀಕ್ ಎಂಬಾತ ಒಂದು ದಿನದ ಬಾಡಿಗೆಗೆ ಬುಕ್ ಮಾಡಿಕೊಂಡಿದ್ದ. ನಿಗದಿತ ಅವಧಿ ಮುಗಿದರೂ ಕಾರನ್ನು ಹಿಂದಿರುಗಿಸದ ಹಿನ್ನೆಲೆ ಕಾರಿನ ಮಾಲೀಕರು ಜೂಮ್ ಕಂಪನಿಯನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರಿನ ಜಿಪಿಎಸ್ ಸಾಧನವನ್ನು ತೆಗೆದುಹಾಕಿ ಆರೋಪಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿ : BIKE THEFT : ಮನೆಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಖದೀಮ ಎಸ್ಕೇಪ್

ಬಾಡಿಗೆ ಪಡೆದು ಕಾರು ಕಳ್ಳತನ ಮಾಡಿ ಪರಾರಿ
ಬಾಡಿಗೆ ನೆಪದಲ್ಲಿ ಕಾರು ಪಡೆದುಕೊಂಡಿದ್ದ ಆರೋಪಿ ಬಳಿಕ ವಾಹನವನ್ನು ಕೇರಳಕ್ಕೆ ಕೊಂಡೊಯ್ದು ಮತ್ತೊಬ್ಬರಿಗೆ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ ಕಾರಿನ ಫಾಸ್ಟ್ ಟ್ಯಾಗ್ನ್ನೂ ಕಿತ್ತು ಹಾಕಿ ಪೊಲೀಸರ ಕಣ್ತಪ್ಪಿಸಲು ಯತ್ನಿಸಿದ್ದಾನೆ. ಇನ್ನು ಕಂಪನಿಯವರು ಸಂಪರ್ಕಿಸಿದಾಗ ವಾಹನವನ್ನು ಮರಳಿ ನೀಡುವುದಾಗಿ ಹೇಳಿ ಕಾಲಹರಣ ಮಾಡುತ್ತಿದ್ದ ಆರೋಪಿ, ಬಳಿಕ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Theft – ಮಲ್ಲೇಶ್ವರಂ ಪೊಲೀಸರಿಂದ ಆರೋಪಿಯ ಬಂಧನ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರ ಠಾಣೆ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಮಿಶೆಲ್ ಶಫೀಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕಳುವಾಗಿರುವ ಕಾರಿನ ಪತ್ತೆ ಮತ್ತು ವಶಪಡಿಸಿಕೊಳ್ಳುವ ಕಾರ್ಯಕ್ಕಾಗಿ ಪೊಲೀಸ್ ತಂಡ ಕೇರಳಕ್ಕೆ ತೆರಳಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದೆ.

ಇದನ್ನು ನೋಡಿ : ರಾಮ ತಂದೆಗೆ ಹುಟ್ಟಿದವನು ಅಲ್ಲ ಮತ್ತೆ ನಾಲಿಗೆ ಹರಿಬಿಟ್ಟ ಫ್ರೋ ಕೆ ಎಸ್ ಭಗವಾನ್




