ಕೇರಳದಲ್ಲಿ 4 ವರ್ಷದ ಮಗು ಜೀವ ತೆಗೆದ ಶೆಗೆಲ್ಲಾ ವೈರಸ್.

ಕೇರಳದಲ್ಲಿ ಶಿಗೆಲ್ಲ ಸೋಂಕಿನ ಆತಂಕ ಹೆಚ್ಚಾಗಿದ್ದು, ನಾಲ್ಕು ವರ್ಷದ ಮಗು ಸೋಂಕಿಗೆ ಬಲಿಯಾದ ಘಟನೆ ವರದಿಯಾಗಿದೆ. ಇದ್ರಿಂದ ಆರೋಗ್ಯ ಇಲಾಖೆಯಲ್ಲಿ ಕಳವಳ ಮೂಡಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನು ಓದಿ : 6 ವರ್ಷದ ವೆನ್ನಿಲಾ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್!

4 ವರ್ಷದ ಮಗು ಜೀವ ತೆಗೆದ ಶೆಗೆಲ್ಲಾ ವೈರಸ್ – ಏನಿದರ ಲಕ್ಷಣ?
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 4 ವರ್ಷದ ಮಗು ಶಿಗೆಲ್ಲ ಸೋಂಕಿನಿಂದ ಮೃತಪಟ್ಟಿದೆ ಎಂದು ವರದಿಯಾಗಿದೆ. ಶಿಗೆಲ್ಲಾ ಎನ್ನುವುದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಆಗಿದ್ದು, ಮುಖ್ಯವಾಗಿ ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ ಇಲಾಖೆ ಅಲರ್ಟ್!
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸೋಂಕಿನ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಸೋಂಕಿನ ಹರಡುವಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಇದನ್ನು ನೋಡಿ : ದೇವಿ ಪ್ರತಿಷ್ಠಾಪನೆ ಹೆಸರಲ್ಲಿ ಕಲ್ಯಾಣಿ ಒತ್ತುವರಿಕೋರ್ಟ್ ಆದೇಶದಂತೆ ಅಧಿಕಾರಿಗಳಿಂದ ಸರ್ವೇ




