‘Toxic’ ಚಿತ್ರದ Tabaahi Video ಸಾಂಗ್ ರಿಲೀಸ್: ಬೋಲ್ಡ್ ಅವತಾರದಲ್ಲಿ ಯಶ್-ಕಿಯಾರಾ

ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ (Tabaahi) ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಹಾಗೂ ಅದ್ದೂರಿ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ರಾಯ-ರುಮಿ ರೊಮ್ಯಾನ್ಸ್ಗೆ ಫ್ಯಾನ್ಸ್ ಫಿದಾ
ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ ಚಿತ್ರದ ಪ್ರಚಾರ ಈಗಾಗಲೇ ಜೋರಾಗಿದೆ. ಈ ಹಿಂದೆ ಟೀಸರ್ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡ, ಇದೀಗ ‘ತಬಾಹಿ’ ವಿಡಿಯೋ ಸಾಂಗ್ ಅನ್ನು ಬೆಳಿಗ್ಗೆ 11.33ಕ್ಕೆ ಬಿಡುಗಡೆ ಮಾಡಿದೆ. ಹಾಡಿನಲ್ಲಿ ಯಶ್ ‘ರಾಯ್’ ಪಾತ್ರದಲ್ಲಿ ಹಾಗೂ ಕಿಯಾರಾ ಅಡ್ವಾಣಿ ‘ರುಮಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಅದ್ದೂರಿ ದೃಶ್ಯ ವೈಭವ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.
ಇದನ್ನು ಓದಿ : Toxic ಬಗ್ಗೆ ಅಪ್ಡೇಟ್ ಕೇಳ್ತಿದ್ದವರಿಗೆ ಚಿತ್ರತಂಡ ಸರ್ಪ್ರೈಸ್

ಯೋಗರಾಜ್ ಭಟ್ ಸಾಹಿತ್ಯದ ಮೂಡಿ ಬಂದ Tabaahi ಹಾಡು
ಹಾಡಿನ ಒಂದು ದೃಶ್ಯದಲ್ಲಿ ನಟಿ ನಯನತಾರಾ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಹಾಡು ಕೇವಲ ಸಂಗೀತಕ್ಕಷ್ಟೇ ಸೀಮಿತವಾಗದೇ, ಸಿನಿಮಾದ ಭವ್ಯತೆಯ ಒಂದು ಝಲಕ್ ನೀಡುವಂತಿದೆ. ಈ ಹಾಡಿಗೆ ಕನ್ನಡದ ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಈ ಹಿಂದೆ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದರೆ, ಇದೀಗ ಪೂರ್ಣ ವಿಡಿಯೋ ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಡ್ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ.

ಇದನ್ನು ನೋಡಿ : ತುಮಕೂರಿಗೆ ದಿಢೀರ್ ಎಲೆಕ್ಷನ್ ಕಮಿಷನ್ ವಿಸಿಟ್ – ಜಿಲ್ಲೆಯ ಅಧಿಕಾರಿಗಳೊಂದಿಗೆ ಸಿಕ್ರೇಟ್ ಮೀಟಿಂಗ್




