ಗೆದ್ದರೂ 12 ಲಕ್ಷ ರೂ. ದಂಡಕ್ಕೆ ಗುರಿಯಾದ Rishab Pant

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಭರ್ಜರಿ ಗೆಲುವಿನ ಹೊರತಾಗಿಯೂ, IPL ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಖನೌ ಸೂಪರ್ ಜೇಂಟ್ಸ್ ತಂಡದ ನಾಯಕ ರಿಷಭ್ ಪಂತ್ಗೆ ಬಿಸಿಸಿಐ ಭಾರೀ ದಂಡ ವಿಧಿಸಿದೆ. ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಪಂತ್ಗೆ 12 ಲಕ್ಷ ರೂ. ದಂಡ ವಿಧಿಸಿದೆ.

ಗೆದ್ದರೂ 12 ಲಕ್ಷ ರೂ. ದಂಡಕ್ಕೆ ಗುರಿಯಾದ ರಿಷಭ್ ಪಂತ್
ಐಪಿಎಲ್ ತನ್ನ ಹೇಳಿಕೆಯಲ್ಲಿ “ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಇದು ಈ ಋತುವಿನಲ್ಲಿ Rishabh Pant ನೇತೃತ್ವದ ತಂಡದ ಮೊದಲ ತಪ್ಪಾಗಿರುವುದರಿಂದ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ತಿಳಿಸಲಾಗಿದೆ.

ಬಿಸಿಸಿಐ ಹಲವಾರು ನಾಯಕ Rishabh Pant ಗೆ ದಂಡ
ಈ ಋತುವಿನಲ್ಲಿ ನಿಧಾನಗತಿಯ ಓವರ್ ರೇಟ್ ಪ್ರಕರಣದಲ್ಲಿ ದಂಡಕ್ಕೊಳಗಾದ ನಾಯಕರ ಪಟ್ಟಿಗೆ ಇದೀಗ ಪಂತ್ ಕೂಡ ಸೇರ್ಪಡೆಗೊಂಡಿದ್ದಾರೆ. ಈ ಮೊದಲು ಪ್ಯಾಟ್ ಕಮ್ಮಿಸ್ ನೇತೃತ್ವದ SRH ತಂಡಕ್ಕೂ ಇದೇ ಕಾರಣಕ್ಕೆ ದಂಡ ವಿಧಿಸಲಾಗಿತ್ತು. ಅಲ್ಲದೆ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಹಾಗೂ ಶುಭ್ಮನ್ ಗಿಲ್ ಅವರಿಗೂ ತಮ್ಮ ತಂಡಗಳ ನಿಧಾನಗತಿಯ ಓವರ್ ರೇಟ್ ಕಾರಣದಿಂದಾಗಿ ಬಿಸಿಸಿಐ ದಂಡ ವಿಧಿಸಿತ್ತು.
READ THIS : ಎಣ್ಣೆ ಕೊಡಿಸದಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ!

LSG ವಿರುದ್ಧ CSK ಸೋಲು
ಶುಕ್ರವಾರ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 188 ರನ್ಗಳನ್ನು ಸುಲಭವಾಗಿ ಬೆನ್ನಟ್ಟುವ ಮೂಲಕ ಎಲ್ಎಸ್ಜಿ ತಂಡ ಸಿಎಸ್ಕೆಗೆ ಸೋಲುಣಿಸಿತು.

MUST WATCH : PETROL, DIESEL ದರ ಏಕಾಏಕಿ ಏರಿಕೆ – ಈಗ ಪೆಟ್ರೋಲ್ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ?




