Bengaluru : ಕಟ್ಟಿಂಗ್ ಪ್ಲೇಯರ್, ಸ್ಕ್ರೂ ಡ್ರೈವರ್ನಿಂದ ಹಲ್ಲೆ ಆರೋಪ.

ಸಿಲಿಕಾನ್ ಸಿಟಿ Bengaluru ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್ ಕಟ್ಟಿಕೊಂಡು ಮನಬಂದಂತೆ ಹಲ್ಲೆ ಮಾಡುತ್ತಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಕೆ ಆರ್ ಪುರ ಬಳಿಯ ಅಯ್ಯಪ್ಪನಗರದಲ್ಲಿ ಪುಡಿರೌಡಿಗಳು ಆಟೋ ಚಾಲಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದು, ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಟ್ಟಿಂಗ್ ಪ್ಲೇಯರ್, ಸ್ಕ್ರೂ ಡ್ರೈವರ್ನಿಂದ ಹಲ್ಲೆ ಆರೋಪ
ಬೆಂಗಳೂರಿನ ಕೆ.ಆರ್ ಪುರ ಬಳಿಯ ಅಯ್ಯಪ್ಪ ನಗರದಲ್ಲಿ ನಿನ್ನೆ ಮಧ್ಯಾಹ್ನ 2:30ರ ಸುಮಾರಿಗೆ ಆಟೋ ಚಾಲಕನ ಬಳಿ ಎಣ್ಣೆ ಕೊಡಿಸಲು ಎಂದು ಇಬ್ಬರು ಯುವಕರ ಗ್ಯಾಂಗ್ ಕೇಳಿದ್ದಾರೆ. ಆದ್ರೆ ಆಟೋ ಚಾಲಕ ತನ್ನ ಬಳಿ ಹಣ ಇಲ್ಲ ಎಣ್ಣೆ ಕೊಡಿಸಲು ಆಗಲ್ಲ ಎಂದಿದ್ದಕ್ಕೆ, ಆಟೋದಲ್ಲಿ ಇದ್ದ ಕಟಿಂಗ್ ಪ್ಲೇಯರ್ ಹಾಗೂ ಸ್ಕ್ರೂ ಡ್ರೈವರ್ ತಗೊಂಡು ಹಲ್ಲೆ ಮಾಡಿದ್ದಾರೆ.
ಬಳಿಕ ಆಟೋ ಲಾಕ್ ಮಾಡಿ ಕೆಳಗೆ ಇಳಿದು ಹೋಗಿ ಎಂದು ಆಟೋ ಚಾಲಕ ಕೇಳಿಕೊಂಡ್ರು ಕೇಳದ ಯುವಕರು, ಆಟೋ ಚಾಲಕನ ತಲೆ, ಕಿವಿ, ಎದೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಪುಡಿ ರೌಡಿಗಳ ಹಲ್ಲೆಯಿಂದ ಆಟೋ ಚಾಲಕ ವೆಂಕಟೇಶ್ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಓಡಿ ಬಂದು, ಕಂಪ್ಲೇಟ್ ಕೊಟ್ಟಿದ್ದಾರೆ. ದೂರು ದಾಖಲಿಸಿದ ಬಳಿಕ ಆಟೋ ಚಾಲಕ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
READ THIS : ಟ್ರ್ಯಾಕ್ಟರ್ ಅಪಘಾತ – ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಪುಡಿ ರೌಡಿಗಳ ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಇನ್ನು ಪುಡಿ ರೌಡಿಗಳು ಆಟೋ ಚಾಲಕರು ಹಾಗೂ ಸ್ಥಳೀಯರ ಬಳಿ ರೋಲ್ ಕಾಲ್ ಮಾಡ್ತಿದ್ದರು ಎಂದು ಆಟೋ ಚಾಲಕ ವೆಂಕಟೇಶ್ ಆರೋಪ ಮಾಡಿದ್ದಾರೆ. ಪುಡಿ ರೌಡಿಗಳ ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುಡಿ ರೌಡಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ ವಿಪರೀಯವಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

MUST WATCH : ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ – ವಿಡಿಯೋ ಮಾಡಿ ಹರಿಬಿಟ್ಟ ಆರೋಪಿಗಳು ಅರೆಸ್ಟ್..!




