Goa ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ಅವರು ನಾಗರಹಾವು ಕಡಿದು ಸಾವನ್ನಪ್ಪಿದ್ದಾರೆ.

Goa ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ಅವರು ದುರಂತವಾಗಿ ನಾಗರಹಾವು ಕಡಿದು ಸಾವನ್ನಪ್ಪಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಆಘಾತ ಮತ್ತು ಶೋಕವನ್ನುಂಟುಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಂಡಾದಿಂದ ಜೋಯಿಡಾ ಭಾಗಕ್ಕೆ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಕಾರು ನಿಲ್ಲಿಸಿದ ನಂತರ ಕೇತನ್ ಭಾಟಿಕರ್ ಅವರು ಮೂತ್ರ ವಿಸರ್ಜನೆಗಾಗಿ ಕಾಡು ಪ್ರದೇಶಕ್ಕೆ ತೆರಳಿದ್ದರುಆ ಸಮಯದಲ್ಲಿ ನಾಗರಹಾವು ಕಡಿದಿದೆ ಎಂದು ತಿಳಿದುಬಂದಿದೆ.
MUST READ : Karnataka ದಲ್ಲಿ ಭಾರೀ ಮಳೆ ಮುನ್ಸೂಚನೆ – 3 ದಿನ ಯೆಲ್ಲೋ ಅಲರ್ಟ್..!!
ತಕ್ಷಣವೇ ಅವರನ್ನು ಗೋವಾದ ಜಿಎಂಸಿ ಮೆಡಿಕಲ್ ಕಾಲೇಜು (ಬಾಂಬೋಲಿನ್) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪೊಲೀಸ್ ಪ್ರಕರಣ ಮತ್ತು ರಾಜಕೀಯ ಹಿನ್ನೆಲೆ
ಈ ಘಟನೆ ಸಂಬಂಧ ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇತನ್ ಭಾಟಿಕರ್ ಅವರು ಗೋವಾದ ಪೊಂಡಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.ಇತ್ತೀಚೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿ ಎಂದೇ ಗುರುತಿಸಲ್ಪಟ್ಟಿದ್ದರು.
ರಾಜಕೀಯ ವಲಯದಲ್ಲಿ ಶೋಕ
ಕೃಷಿ ಸಚಿವ ರವಿ ನಾಯ್ಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅವರು ಪ್ರಮುಖ ಅಭ್ಯರ್ಥಿಯಾಗಿದ್ದರು. ಅವರ ಅಕಾಲಿಕ ಸಾವಿನಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ಆಘಾತ ವ್ಯಕ್ತವಾಗಿದೆ.
MUST WATCH : ಮೋದಿ ಕರೆಯನ್ನ ಫಾಲೋ ಮಾಡಿದ ವಿಜಯೇಂದ್ರ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ರು




