ಚನ್ನಪಟ್ಟಣದ ಕಾಂಗ್ರೆಸ್ ಶಾಸಕ C.P Yogeshwar ಅವರ ವೈಯಕ್ತಿಕ ಕುಟುಂಬ ಜಗಳ ಈಗ ಮತ್ತೆ ಬೀದಿಗೆ ಬಂದಿದೆ.

ಯೋಗೇಶ್ವರ್ ಅವರ ಮನೆ ಜಗಳ ಇದೀಗ ಬೀದಿಗೆ ಬಂದಿದೆ. ಅಪ್ಪ ಯೋಗೇಶ್ವರ್ ಹಾಗೂ ಮಗಳು ನಿಶಾ ಯೋಗೇಶ್ವರ್ ನಡುವಿನ ಗಲಾಟೆ ಇತ್ತೀಚೆಗೆ ತಾರಕಕ್ಕೇರಿದ್ದು, ತಂದೆ ಯೋಗೇಶ್ವರ್ ಮೇಲೆ ನಿಶಾ ಸಾಕಷ್ಟು ಆರೋಪಗಳನ್ನು ಮಾಡಿದ್ರು. ಇದೀಗ ಮಗಳ ಆರೋಪಕ್ಕೆ ಮೊದಲ ಬಾರಿಗೆ ಶಾಸಕ ಯೋಗೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ಶಾಸಕರ ಮನೆ ಜಗಳ ಇದೀಗ ಸಾರ್ವಜನಿಕ ಚರ್ಚೆಗೆ ಬಂದಿದ್ದು, ರಾಜಕೀಯ ವಲಯದಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ಬೀದಿಗೆ ಬಂದ ಯೋಗೇಶ್ವರ್ ಮನೆಯ ಜಗಳ
ಕಳೆದ ವಾರ ಶಾಸಕ C.P Yogeshwar ಅವರ ಹುಟ್ಟೂರಾದ ಚಕ್ಕೆರೆ ಗ್ರಾಮದಲ್ಲಿ ಹಬ್ಬ ನಡೆಯಿತು. ಊರ ಹಬ್ಬದ ಸಂದರ್ಭದಲ್ಲಿ ಯೋಗೇಶ್ವರ್ ಅವರ ಮೊದಲ ಪತ್ನಿ ಮಂಜುಳಾ ಮತ್ತು ಪುತ್ರಿ ನಿಶಾ ಚಕ್ಕೆರೆಗೆ ಬಂದಿದ್ದರು. ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಮನೆ ಬಳಿ ಆಗಮಿಸಿದ್ರು. ಆದ್ರೆ ಯೋಗೇಶ್ವರ್ ಅವರ ಮನೆಗೆ ಬೀಗ ಹಾಕಲಾಗಿದ್ದು, ಯೇಗೇಶ್ವರ್ ಮಗಳು ನಿಶಾ ತಂದೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ರು. ಯೋಗೇಶ್ವರ್ ಅವರ ಮಗಳ ನಡೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
READ THIS : ಪಂದ್ಯ ಗೆದ್ರೂ ರಿಷಭ್ಗೆ ಶಾಕ್ – ಪಂತ್ಗೆ 12 ಲಕ್ಷ ರೂಪಾಯಿ ದಂಡ!

ಮಗಳ ಆರೋಪಕ್ಕೆ ಫೇಸ್ಬುಕ್ ಖಾತೆ ಮೂಲಕ ಸ್ಪಷ್ಟನೆ
ಇದೀಗ ತಮ್ಮ ಮಗಳ ಆರೋಪಗಳಿಗೆ ಶಾಸಕ ಸಿ.ಪಿ. ಯೋಗೇಶ್ವರ್ ತಮ್ಮ ಫೇಸ್ಬುಕ್ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಮಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾಳೆ. ಅವರ ತಾಯಿಗೂ ನನಗೂ ವಿಚ್ಛೇದನ ಆಗಿ ಈಗ 25 ವರ್ಷಗಳಾಗಿವೆ. ಇಷ್ಟು ವರ್ಷಗಳ ಬಳಿಕ, ಈಗ ನನ್ನ ವಿರುದ್ಧ ಈ ರೀತಿಯ ಆರೋಪಗಳು ಬರುತ್ತಿರುವುದು ರಾಜಕೀಯ ಉದ್ದೇಶದಿಂದ ಮಾಡಿದ ತೇಜೋವಧೆ’ ಎಂದು ಅವರು ಹೇಳಿದ್ದಾರೆ. ಈ ಆರೋಪಗಳ ಹಿಂದೆ ರಾಜಕೀಯ ವಿರೋಧಿಗಳ ಕೈವಾಡ ಇದೆ ಎಂದು ಯೋಗೇಶ್ವರ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಅಪ್ಪ- ಮಗಳ ಆರೋಪ ಪ್ರತ್ಯಾರೋಪ ಯಾವ ಹಂತಕ್ಕೆ ಹೋಗಲಿದೆ?
ಶಾಸಕ ಯೋಗೇಶ್ವರ್ ಹಾಗೂ ಪುತ್ರಿ ನಿಶಾ ನಡುವಿನ ಆರೋಪ, ಜಗಳಗಳು ಸುಮಾರು ವರ್ಷಗಳಿಂದಲೂ ನಡೆದುಕೊಂಡು ಬರ್ತಾನೆ ಇವೆ. ಇದೀಗ ಅಪ್ಪ- ಮಗಳ ಆರೋಪ ಪ್ರತ್ಯಾರೋಪ ಯಾವ ಹಂತಕ್ಕೆ ಹೋಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.
MUST WATCH : ಪಶ್ಚಿಮ ಬಂಗಾಳದಲ್ಲಿ ತೀವ್ರ ಸಂಚಲನ – ಮೂವರು IPS ಅಧಿಕಾರಿಗಳು SUSPEND




