Zameer Ahmed ಗೆ ಶಾಕ್ – ನಕಲಿ ಐಟಿಸಿ ಹಗರಣದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ಗೆ IT ನೋಟಿಸ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೃಹತ್ ತೆರಿಗೆ ವಂಚನೆ ಜಾಲವೊಂದನ್ನು ಭೇದಿಸಿದ್ದಾರೆ. ಸುಮಾರು ₹2,000 ಕೋಟಿ ಮೊತ್ತದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಹಗರಣ ಪತ್ತೆಯಾಗಿದ್ದು, ತನಿಖೆಯ ಭಾಗವಾಗಿ ರಾಜ್ಯ ಸರ್ಕಾರದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ಇಲಾಖೆಯು ನೋಟಿಸ್ ಜಾರಿ ಮಾಡಿದೆ.

ಸ್ಕ್ರಾಪ್ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿ
ವಾಣಿಜ್ಯ ತೆರಿಗೆ ಇಲಾಖೆಯ ತನಿಖೆಯ ಪ್ರಕಾರ, ವಂಚಕರು ಸ್ಕ್ರಾಪ್ (ಕಬ್ಬಿಣ ಇತ್ಯಾದಿ ಗುಜರಿ ಸಾಮಗ್ರಿ) ಸಾಗಾಟದ ಹೆಸರಿನಲ್ಲಿ ಯಾವುದೇ ನಿಜವಾದ ವ್ಯವಹಾರ ನಡೆಸದೆ ಕೇವಲ ನಕಲಿ ಬಿಲ್ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಎಸಗುತ್ತಿದ್ದರು.
ಈ ನಕಲಿ ಬಿಲ್ ಸಾಗಾಟಕ್ಕೆ ಹಾಗೂ ಜಾಲದ ನಕಲಿ ವ್ಯವಹಾರಗಳ ದೃಢೀಕರಣಕ್ಕಾಗಿ ಸಚಿವ Zameer Ahmed ಅವರಿಗೆ ಸೇರಿದ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಯ ಲಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಾಹನಗಳ ಬಳಕೆಯ ಕುರಿತು ಸ್ಪಷ್ಟನೆ ಹಾಗೂ ದಾಖಲೆಗಳನ್ನು ನೀಡುವಂತೆ ಇಲಾಖೆಯು ಈ ನೋಟಿಸ್ ನೀಡಿದೆ ಎನ್ನಲಾಗಿದೆ.
READ THIS : ಬೀದಿಗೆ ಬಂದ ಶಾಸಕ ಸಿ.ಪಿ ಯೋಗೇಶ್ವರ್ ಮನೆಯ ಜಗಳ

ಪ್ರಕರಣದ ಪ್ರಮುಖ ಅಂಶಗಳು
- ಸುಮಾರು ₹2,000 ಕೋಟಿ ನಕಲಿ ITC ಹಗರಣ ಪತ್ತೆ
- ಈಗಾಗಲೇ 7 ಮಂದಿ ಪ್ರಮುಖ ಆರೋಪಿಗಳ ಬಂಧನ
- ನಕಲಿ ಕಂಪನಿಗಳು ಮತ್ತು ಇ-ವೇ ಬಿಲ್ ಜಾಲದ ಬಳಕೆ ಆರೋಪ
- ಲಾರಿಗಳ ಮೂಲಕ ನಕಲಿ ಸಾಗಾಟದ ದಾಖಲೆ ಸೃಷ್ಟಿ ಆರೋಪ
ಮುಂದುವರಿದ ತನಿಖೆ
ಇನ್ನು ತೆರಿಗೆ ವಂಚನೆ ಜಾಲದ ಹಿಂದಿರುವ ನಕಲಿ ಕಂಪನಿಗಳು, ಹಣದ ಹರಿವು ಹಾಗೂ ಲಾಜಿಸ್ಟಿಕ್ಸ್ ಬಳಕೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆಯಿಂದ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆಯಿದ್ದು, ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯು ನೋಟಿಸ್ಗೆ ಯಾವ ರೀತಿಯ ಪ್ರತಿಕ್ರಿಯೆ ಮತ್ತು ದಾಖಲೆಗಳನ್ನು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

MUST WATCH : GOLD IMPORTಗೆ ಕೇಂದ್ರದ BREAK..! – ಎಷ್ಟು ಕೆಜಿ ಚಿನ್ನ ತರಬಹುದು ಗೊತ್ತಾ.?




