BMTC ಹಾಗೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ವೇತನ ಹೆಚ್ಚಳದ ವಿಚಾರವಾಗಿ ನಡೆಯುತ್ತಿರುವ ಹೋರಾಟದ ನಡುವೆಯೇ, BMTC ನೌಕರರಿಗೆ ಮಹತ್ವದ ಗುಡ್ನ್ಯೂಸ್ ಸಿಕ್ಕಿದೆ. ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ ನಡೆಯುತ್ತಿರುವ ಸಮಯದಲ್ಲೇ ಸಾರಿಗೆ ಇಲಾಖೆ 11 ತಿಂಗಳ ಹಿಂಬಾಕಿ ವೇತನವನ್ನು ಬಿಡುಗಡೆ ಮಾಡಿದೆ.

BMTC ನೌಕರರ ಖಾತೆಗೆ ಹಿಂಬಾಕಿ ವೇತನ ಜಮೆ
ಬಿಎಂಟಿಸಿ (BMTC) ನೌಕರರ ಖಾತೆಗಳಿಗೆ 11 ತಿಂಗಳ ಅರಿಯರ್ಸ್ ಹಣವನ್ನು ಸಾರಿಗೆ ಇಲಾಖೆ ಜಮೆ ಮಾಡಿದೆ. ಈ ಕ್ರಮದಿಂದ ಸಾವಿರಾರು ನೌಕರರಿಗೆ ತಾತ್ಕಾಲಿಕ ಆರ್ಥಿಕ ನಿರಾಳತೆ ಸಿಕ್ಕಂತಾಗಿದೆ.
MUST READ : Davanagere : ಚನ್ನಗಿರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅತಾವುಲ್ಲಾ ಬರ್ಬರ ಹತ್ಯೆ..!!
ಇತ್ತೀಚೆಗೆ ರಾಜ್ಯ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಒಟ್ಟು 26 ತಿಂಗಳ ಹಿಂಬಾಕಿ ವೇತನ ಪಾವತಿಸಲು ಒಪ್ಪಿಗೆ ಸೂಚಿಸಿತ್ತು. ಅದರ ಭಾಗವಾಗಿ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.

BMTC ಮಾತ್ರವಲ್ಲದೆ, ಉಳಿದ ಮೂರು ಸಾರಿಗೆ ನಿಗಮಗಳ ನೌಕರರಿಗೂ ಹಿಂಬಾಕಿ ಹಣ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸಾರಿಗೆ ಇಲಾಖೆಯ ನೌಕರರಲ್ಲಿ ಕೆಲ ಮಟ್ಟಿನ ಸಮಾಧಾನ ಮೂಡಿದೆ.
ಆದರೆ ಇನ್ನೂ 15 ತಿಂಗಳ ಹಿಂಬಾಕಿ ವೇತನ ಬಾಕಿಯಿದ್ದು, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ನೌಕರರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮೇ 20ರಿಂದ ಮುಷ್ಕರ ಸಾಧ್ಯತೆ
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಇದೇ ವೇಳೆ ಸರ್ಕಾರದ ಸಾಧನ ಸಮಾವೇಶಕ್ಕೂ ಹೋರಾಟದ ಬಿಸಿ ತಟ್ಟಿಸಲು ನೌಕರ ಸಂಘಟನೆಗಳು ಮುಂದಾಗಿವೆ.
ಇದೀಗ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೊಂಡಿರುವುದರಿಂದ ಮುಷ್ಕರದ ತೀವ್ರತೆ ಕಡಿಮೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
MUST WATCH : ಮೋದಿ ಕರೆಯನ್ನ ಫಾಲೋ ಮಾಡಿದ ವಿಜಯೇಂದ್ರ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ರು




