Mangaluru ನ ಕುಂಟಿಕಾನದಲ್ಲಿ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಲಿಫ್ಟ್ ಏಕಾಏಕಿ ಕುಸಿದು ಇನ್ಸ್ಟಾ ಮಾರ್ಟ್ ಉದ್ಯೋಗಿ ನೌಫಾಲ್ ಸಾವನ್ನಪ್ಪಿದ್ದಾರೆ.

Mangaluru ನಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಲಿಫ್ಟ್ ಏಕಾಏಕಿ ಕುಸಿದು ಇನ್ಸ್ಟಾ ಮಾರ್ಟ್ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ನಗರದ ಕುಂಟಿಕಾನ ಪ್ರದೇಶದಲ್ಲಿ ನಡೆದಿದೆ.
ಲಿಫ್ಟ್ನಲ್ಲಿ ಸಿಲುಕಿ ಯುವಕ ದುರ್ಮರಣ
ಬೆಳ್ತಂಗಡಿ ತಾಲೂಕಿನ ಬೆಳಲು ನಿವಾಸಿಯಾದ ನೌಫಾಲ್ (28) ಮೃತ ಉದ್ಯೋಗಿ ಎಂದು ಗುರುತಿಸಲಾಗಿದೆ. ಅವರು ಇನ್ಸ್ಟಾ ಮಾರ್ಟ್ ಸಪ್ಲೈ ಪಾಯಿಂಟ್ನಲ್ಲಿ ಕೆಲಸ ಮಾಡುತ್ತಿದ್ದರು.
ದಿನಸಿ ವಸ್ತುಗಳನ್ನು ಲಿಫ್ಟ್ ಮೂಲಕ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಲಿಫ್ಟ್ ಏಕಾಏಕಿ ಕುಸಿದ ಪರಿಣಾಮ ನೌಫಾಲ್ ಅದರೊಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
MUST READ : Davanagere : ಚನ್ನಗಿರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅತಾವುಲ್ಲಾ ಬರ್ಬರ ಹತ್ಯೆ..!!

ಸಿಸಿಟಿವಿಯಲ್ಲಿ ಸೆರೆಗೊಂಡ ಭೀಕರ ದೃಶ್ಯ
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ. ದುರಂತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಘಟನೆ ಬಳಿಕ ಲಿಫ್ಟ್ಗಳ ಸುರಕ್ಷತೆ ಹಾಗೂ ಉದ್ಯೋಗಿಗಳ ಭದ್ರತಾ ಕ್ರಮಗಳ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ವಾಣಿಜ್ಯ ಕಟ್ಟಡಗಳಲ್ಲಿ ಬಳಸುವ ಲಿಫ್ಟ್ಗಳ ನಿರ್ವಹಣೆಯ ಕುರಿತು ಕಠಿಣ ನಿಯಮ ಜಾರಿಯಾಗಬೇಕೆಂಬ ಆಗ್ರಹ ಕೇಳಿಬರುತ್ತಿದೆ.
MUST WATCH : ಮೋದಿ ಕರೆಯನ್ನ ಫಾಲೋ ಮಾಡಿದ ವಿಜಯೇಂದ್ರ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ರು




