ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಪತ್ನಿ Indira Lankesh ಅವರು ಜೂನ್ 15 ಸೋಮವಾರದಂದು ನಿಧನರಾಗಿದ್ದಾರೆ.

ಖ್ಯಾತ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಇಂದು ನಿಧನರಾಗಿದ್ದಾರೆ. 84 ವರ್ಷದ ಇಂದಿರಾ ವಯೋಸಹಜ ಅನಾರೋಗ್ಯ ಎದುರಿಸುತ್ತಿದ್ದರು. ಅವರು ಇಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಇಂದಿರಾ ಲಂಕೇಶ್ ಅವರು ಪುತ್ರ ಇಂದ್ರಜಿತ್ ಲಂಕೇಶ್, ಪುತ್ರಿ ಕವಿತಾ ಲಂಕೇಶ್ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ಖ್ಯಾತ ಪತ್ರಕರ್ತ ಪಿ ಲಂಕೇಶ್ ಪತ್ನಿನಿಧನ
ಇತಿಹಾಸ ಸೃಷ್ಟಿಸಿದ್ದ ಲಂಕೇಶ್ ಪತ್ರಿಕೆಯ ಆರಂಭದ ದಿನಗಳಿಂದಲೇ ಪಿ. ಲಂಕೇಶ್ ಅವರ ಹೋರಾಟದಲ್ಲಿ Indira Lankesh ಹೆಜ್ಜೆ ಹಾಕಿದ್ದರು. ಪತಿ ನಿಧನದ ಬಳಿಕವೂ ಪತ್ರಿಕೆ ಹಾಗೂ ಲಂಕೇಶ್ ಪ್ರಕಾಶನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಕುಟುಂಬದ ಪರಂಪರೆಯನ್ನು ಮುಂದುವರಿಸಿದ್ದರು.
ಇದನ್ನು ಓದಿ : ಪ್ರಸಿದ್ಧ ತಮಿಳು ಸಿನಿಮಾ ನಿರ್ದೇಶಕ ಭಾರತಿರಾಜ ಇನ್ನಿಲ್ಲ

ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು
ಸರಳತೆ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇಂದಿರಾ ಲಂಕೇಶ್ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು.
ತಮ್ಮ ಜೀವನದ ಅನುಭವಗಳನ್ನು ‘ಹುಳಿ ಮಾವು ಮತ್ತು ನಾನು’ ಎಂಬ ಆತ್ಮಕಥನದಲ್ಲಿ ದಾಖಲಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸ್ವಾವಲಂಬನೆ ಮತ್ತು ಉದ್ಯಮಶೀಲತೆ
ಪಿ. ಲಂಕೇಶ್ ಅವರು ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ, ಇಂದಿರಾ ಲಂಕೇಶ್ ಧೈರ್ಯವಾಗಿ ಮುಂದೆ ಬಂದಿದ್ದರು. ಬ್ಯಾಂಕ್ ಹಾಗೂ ಸ್ನೇಹಿತರಿಂದ ಸಾಲ ಪಡೆದು ಬೆಂಗಳೂರಿನಲ್ಲಿ ಸೀರೆ ಅಂಗಡಿ ಆರಂಭಿಸಿ ಕುಟುಂಬದ ಆರ್ಥಿಕ ಭಾರವನ್ನು ಹೊತ್ತಿದ್ದರು. ಅವರ ಈ ಸ್ವಾವಲಂಬಿ ಬದುಕು ಅನೇಕರಿಗೆ ಮಾದರಿಯಾಗಿದೆ.

2017 ರಲ್ಲಿ ಮಗಳು ಗೌರಿ ಲಂಕೇಶ್ ಹತ್ಯೆ ಬಳಿಕ ಕವಿತಾ ಅವರ ಜೊತೆ ವಾಸಿಸಲು ಶುರು ಮಾಡಿದ್ದ ಅವರು, ಮಗಳ ಸಾವಿನಿಂದ ಬಹಳ ನೊಂದಿದ್ದರು.
ಕೆಲ ಸಂದರ್ಶನದಲ್ಲಿ ಗೌರಿ ತನ್ನ ಮಗಳಲ್ಲ ತಾಯಿ ಎಂದು ಹೇಳಿಕೊಂಡಿದ್ದರು.
ಇದನ್ನು ನೋಡಿ : ಸೈಲೆಂಟ್ ಹಾಗೆ DKS ಕುರ್ಚಿ ಕಿತ್ಕೊಂಡ್ರು – ಹೀಗ್ಯಾಕಂದ್ರು BJP ರಾಜ್ಯಾಧ್ಯಕ್ಷ VIJAYENDRA ?




