ಖ್ಯಾತ ತಮಿಳು ನಿರ್ದೇಶಕ, ನಟ Bharathiaja ವಿಧಿವಶ.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಭಾರತಿರಾಜ ( Bharathiaja ) ಅವರು ಇಂದು ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಥೆಗಾರ ಹಾಗೂ ನಟರಾಗಿಯೂ ಅವರು ಅಪಾರ ಜನಪ್ರಿಯತೆ
ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಭಾರತಿರಾಜ ಅವರು, ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ತೆರೆ ಮೇಲೆ ಕಟ್ಟಿಕೊಡುವ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದರು. ನಿರ್ದೇಶಕರಾಗಿ ಮಾತ್ರವಲ್ಲದೆ, ಕಥೆಗಾರ ಹಾಗೂ ನಟರಾಗಿಯೂ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.

ಪುಟ್ಟಣ್ಣ ಕಣಗಾಲ್ ನೆಚ್ಚಿನ ಶಿಷ್ಯರಾಗಿದ್ದ ಭಾರತಿರಾಜ!
ತಮಿಳುನಾಡಿನ ತೇಣಿ ಜಿಲ್ಲೆಯ ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಜನಿಸಿದ್ದ ಭಾರತಿರಾಜ, ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಸಿನಿಮಾದ ಮೇಲಿನ ಅಪಾರ ಆಸಕ್ತಿಯಿಂದ ಚೆನ್ನೈಗೆ ತೆರಳಿ, ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಚಿತ್ರರಂಗದ ಪಾಠ ಕಲಿತರು.
ಇದನ್ನು ಓದಿ : Malayalam cinema ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ..!!
ಹಲವು ಉತ್ತಮ ಚಿತ್ರಗಳನ್ನು ತೆಲುಗು ಪ್ರೇಕ್ಷಕರಿಗೆ ನೀಡಿದ್ದ ಭಾರತಿರಾಜ
1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಭಾರತಿರಾಜ, ಮೊದಲ ಚಿತ್ರದಲ್ಲೇ ಯಶಸ್ಸಿನ ಶಿಖರ ತಲುಪಿದರು.
ನಂತರ ‘ಕಿಝಕ್ಕೆ ಪೋಗುಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಕಲ್ಲುಕ್ಕುಲ್ ಈರಮ್’, ‘ನಿಝಲ್ಗಲ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು.

6 ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದ Bharathiaja
ತಮ್ಮ ಅದ್ಭುತ ಸಾಧನೆಗಾಗಿ ಭಾರತಿರಾಜ ಅವರಿಗೆ ‘ಅತ್ಯುತ್ತಮ ಚಿತ್ರ’ ಹಾಗೂ ‘ಅತ್ಯುತ್ತಮ ಚಿತ್ರಕಥೆ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ಆರು ರಾಷ್ಟ್ರ ಪ್ರಶಸ್ತಿಗಳು ಲಭಿಸಿದ್ದವು. ಅವರ ಸಿನಿಮಾಗಳು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಮೈಲುಗಲ್ಲುಗಳಾಗಿ ಗುರುತಿಸಿಕೊಂಡಿವೆ.
ಭಾರತಿರಾಜ ಅವರ ನಿಧನದಿಂದ ತಮಿಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ದಿಗ್ಗಜ ನಿರ್ದೇಶಕರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನು ನೋಡಿ : ಥೂ… ಛೀ ಇವಳೆಂಥಾ ಕ್ರೂರಿ ತಾಯಿ ಇರ್ಬೇಕು? – ಪ್ರಿಯಕರನಿಗಾಗಿ ಮಗಳನ್ನೇ ಕೊಂ* ಪಾಪಿ




