ತಮಿಳುನಾಡು CM ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಅರ್ಜಿ ವಿಚಾರಣೆ ಇಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಲಾಗಿದೆ.
1999ರಲ್ಲಿ ವಿವಾಹವಾಗಿದ್ದ ಈ ಜೋಡಿ
ಸಂಗೀತಾ ಅವರು ಈ ವರ್ಷದ ಫೆಬ್ರವರಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನ ಅರ್ಜಿಯ ಬಳಿಕ ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ಪ್ರಕರಣದ ಮೊದಲ ವಿಚಾರಣೆ ಏಪ್ರಿಲ್ 20ರಂದು ನಿಗದಿಯಾಗಿದ್ದರೂ, ಅಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಜೂನ್ 15ರಂದು ಹಾಜರಾಗುವಂತೆ ಸೂಚಿಸಿತ್ತು. ಇದೀಗ ನಡೆದ ವಿಚಾರಣೆಯ ಬಳಿಕ ಪ್ರಕರಣವನ್ನು ಆಗಸ್ಟ್ 7ಕ್ಕೆ ಮುಂದೂಡಲಾಗಿದೆ.
ಇದನ್ನು ಓದಿ : ‘ಜನ ನಾಯಗನ್’ ಬಿಡುಗಡೆಗೆ ದಿನಾಂಕ ಫಿಕ್ಸ್! ಯಾವಾಗ?

ಒಬ್ಬರು ಮಹಿಳಾ ನಟಿಯೊಂದಿಗೆ ಅಕ್ರಮ ಸಂಬಂಧವಿದೆ
ತಮ್ಮ ವಿಚ್ಛೇದನ ಅರ್ಜಿಯಲ್ಲಿ ಸಂಗೀತಾ ಅವರು, ವಿಜಯ್ ಅವರಿಗೆ ಒಬ್ಬರು ಮಹಿಳಾ ನಟಿಯೊಂದಿಗೆ ಅಕ್ರಮ ಸಂಬಂಧವಿದೆ ಮತ್ತು ಈ ವಿಷಯ ತಮಗೆ 2021ರಲ್ಲಿ ತಿಳಿಯಿತು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, CM ವಿಜಯ್ ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ಪದೇ ಪದೇ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.

27 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಮುಂದಾದ್ರಾ CM ವಿಜಯ್?
ಸಂಗೀತಾ ಅವರು ತಮ್ಮ ಅರ್ಜಿಯಲ್ಲಿ ಮಾನಸಿಕ ಕಿರುಕುಳ, ಆರ್ಥಿಕ ನಿರ್ಬಂಧ ಸೇರಿದಂತೆ ಹಲವು ಆರೋಪಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಆಧಾರದ ಮೇಲೆ ವಿಶೇಷ ವಿವಾಹ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ವಿಚ್ಛೇದನಕ್ಕೆ ಮೊಕದ್ದಮೆ ಹೂಡಲಾಗಿದೆ. ಇದೀಗ ತಮ್ಮ 27 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ವಿಜಯ್ – ಸಂಗೀತಾ ಮುಂದಾಗಿದ್ದಾರೆ.
ಇದನ್ನು ನೋಡಿ : PRIYANK KHARGE ಬಗ್ಗೆ ಲಘುವಾಗಿ ಮಾತನಾಡಿದ್ದ BJP ನಾಯಕರಿಗೆ PRIYANK KHARGE ಸವಾಲು





