ವಿಜಯ್ ಸಿಎಂ ಆದ ಬಳಿಕ Jana Nayagan ಸಿನಿಮಾ ಬಿಡುಗಡೆ ಗ್ಯಾರೆಂಟಿ ಎನ್ನಲಾಗಿತ್ತು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ನಿಗದಿ ಆಗಿದೆಯಂತೆ.

ತಮಿಳುನಾಡು ಸಿಎಂ ಹಾಗೂ ಸ್ಟಾರ್ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಇದೀಗ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಬಹು ನಿರೀಕ್ಷಿತ ಈ ಸಿನಿಮಾ ಜೂನ್ 19ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
‘ಜನ ನಾಯಗನ್’ ಬಿಡುಗಡೆ ಯಾವಾಗ?
ವಿಜಯ್ ರಾಜಕೀಯ ಪ್ರವೇಶದ ನಂತರ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದರೂ, ಅವರು ನಟಿಸಿದ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗಿರಲಿಲ್ಲ. ರಾಜಕೀಯ ಕಾರಣಗಳಿಂದ ವಿಳಂಬವಾದ ಈ ಚಿತ್ರ ಈಗ ಅಧಿಕೃತ ಬಿಡುಗಡೆಗೆ ಸಜ್ಜಾಗುತ್ತಿದೆ.

ಪ್ರಮಾಣಪತ್ರ ಮತ್ತು ಬಿಡುಗಡೆ ಸಿದ್ಧತೆ
ಈ ಕುರಿತು ಮಾತನಾಡಿದ್ದ ನಿರ್ಮಾಪಕ ವೆಂಕಟ್ ನಾರಾಯಣ್, ಸೆನ್ಸಾರ್ ಮಂಡಳಿಯಿಂದ (CBFC) ಪ್ರಮಾಣಪತ್ರ ಇನ್ನೂ ದೊರೆತಿಲ್ಲವಾದರೂ ಶೀಘ್ರದಲ್ಲೇ ದೊರೆಯಲಿದೆ ಎಂದು ಹೇಳಿದ್ದರು.
ಇದೀಗ ಮೂಲಗಳ ಪ್ರಕಾರ ಪ್ರಮಾಣಪತ್ರ ದೊರೆಯುವುದು ಖಚಿತವಾಗಿದ್ದು, ಅದರ ಆಧಾರದ ಮೇಲೆ ಬಿಡುಗಡೆ ದಿನಾಂಕ ನಿಗದಿಯಾಗಿರುವುದು ತಿಳಿದುಬಂದಿದೆ.

ಜೂನ್ 19 ಬಿಡುಗಡೆ ಸಾಧ್ಯತೆ
‘ಜನ ನಾಯಗನ್’ ಸಿನಿಮಾ ಜೂನ್ 19ರಂದು ತೆರೆಗೆ ಬರಲು ಸಜ್ಜಾಗಿದ್ದು, ವಿಜಯ್ ಹುಟ್ಟುಹಬ್ಬ (ಜೂನ್ 22)ಕ್ಕೂ ಮುನ್ನವೇ ಚಿತ್ರ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರದ್ದಾಗಿದೆ.
ಈಗಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿದ್ದರೂ, ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ ಎಂದು ಹೇಳಲಾಗಿದೆ.
ಥಿಯೇಟರ್ಗಳಲ್ಲಿ 5 ಶೋ ನಿಯಮದ ಲಾಭ
ವಿಜಯ್ ಸಿಎಂ ಆದ ನಂತರ ಚಿತ್ರಮಂದಿರಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ಮೊದಲ ವಾರದಲ್ಲಿ ದಿನಕ್ಕೆ ಐದು ಶೋಗಳಿಗೆ ಅನುಮತಿ ನೀಡಿರುವ ನಿರ್ಧಾರವೂ ‘ಜನ ನಾಯಗನ್’ ಚಿತ್ರದ ಬಿಡುಗಡೆಗೆ ಹೆಚ್ಚುವರಿ ಲಾಭ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ : ದಳಪತಿ ನಟನೆಯ ಕೊನೆಯ ಚಿತ್ರ Jana Nayagan ಟ್ರೇಲರ್ ರಿಲೀಸ್

ಬಾಕ್ಸ್ ಆಫೀಸ್ ಸ್ಪರ್ಧೆ ತೀವ್ರ
ಆದರೆ ಜೂನ್ 19ರಂದು ಬಿಡುಗಡೆಯಾಗುವ ‘Jana Nayagan’ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಕೂಡ ಅದೇ ದಿನ ಬಿಡುಗಡೆಯಾಗುವ ಸಾಧ್ಯತೆ ಇದೆ.
ಜೊತೆಗೆ ಜೂನ್ 4ರಂದು ರಾಮ್ ಚರಣ್ ಅಭಿನಯದ ‘ಪೆದ್ದಿ’ ಸೇರಿದಂತೆ ಇನ್ನೂ ಕೆಲವು ದೊಡ್ಡ ಸಿನಿಮಾಗಳೂ ಬಿಡುಗಡೆ ಸಾಲಿನಲ್ಲಿ ಇವೆ.
ಚಿತ್ರ ತಂಡ
ಇನ್ನು ‘ಜನ ನಾಯಗನ್’ ಸಿನಿಮಾವನ್ನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇದು ತೆಲುಗಿನ ‘ಭಗವಂತ್ ಕೇಸರಿ’ ಚಿತ್ರದ ರೀಮೇಕ್ ಆಗಿದೆ.
ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು, ಮಮಿತಾ ಬಿಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




