ಹೊಸ ಸಿನಿಮಾಗಳಿಗೆ ದಿನಕ್ಕೆ 5 ಪ್ರದರ್ಶನ – CM ವಿಜಯ್ ಒಪ್ಪಿಗೆ.

ತಮಿಳುನಾಡು ಸರ್ಕಾರ ಹೊಸ ತಮಿಳು ಸಿನಿಮಾಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾದ ಮೊದಲ ಏಳು ದಿನಗಳ ಕಾಲ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಶೋಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಜೋಸೆಫ್ ವಿಜಯ್ ಆದೇಶ ಹೊರಡಿಸಿದ್ದಾರೆ.
ಚಿತ್ರರಂಗದ ಮನವಿಗೆ ಸರ್ಕಾರ ಸ್ಪಂದನೆ
ಇತ್ತೀಚೆಗೆ ತಮಿಳು ಚಿತ್ರರಂಗದ ಪ್ರತಿನಿಧಿಗಳು CM ವಿಜಯ್ ಅವರನ್ನು ಭೇಟಿಯಾಗಿ, ಹೊಸ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಹೆಚ್ಚಿನ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ಸರ್ಕಾರ ಇದೀಗ ಸಿನಿಮಾ ನಿಯಂತ್ರಣ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ.
ಇದನ್ನು ಓದಿ : ವೃದ್ಧೆಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 24 ಕೋಟಿ ವಂಚನೆ!

ಈ ಹಿಂದೆ ನಾಲ್ಕು ಶೋಗಳಿಗೆ ಮಾತ್ರ ಅವಕಾಶ
ತಮಿಳುನಾಡು ಸಿನಿಮಾ ನಿಯಂತ್ರಣ ನಿಯಮಗಳ ಪ್ರಕಾರ ಇದುವರೆಗೆ ದಿನಕ್ಕೆ ನಾಲ್ಕು ಶೋಗಳಿಗೆ ಮಾತ್ರ ಅನುಮತಿ ಇತ್ತು. ವಿಶೇಷ ಹಬ್ಬಗಳು ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ಮಾತ್ರ ಹೆಚ್ಚುವರಿ ಒಂದು ಶೋ ನಡೆಸಲು ಅವಕಾಶ ನೀಡಲಾಗುತ್ತಿತ್ತು.
CM ಹೊಸ ನಿಯಮ ಏನು?
ಹೊಸ ಆದೇಶದ ಪ್ರಕಾರ:
- ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾದ ಮೊದಲ 7 ದಿನಗಳ ಕಾಲ ದಿನಕ್ಕೆ 5 ಶೋ ಪ್ರದರ್ಶನಕ್ಕೆ ಅವಕಾಶ
- ಶನಿವಾರ, ಭಾನುವಾರ, ಸಾರ್ವಜನಿಕ ರಜೆ ಹಾಗೂ ಸ್ಥಳೀಯ ಹಬ್ಬಗಳ ದಿನಗಳಲ್ಲೂ 5 ಶೋ ನಡೆಸಲು ಅನುಮತಿ
- ಹೆಚ್ಚುವರಿ ಶೋಗಾಗಿ ಸರ್ಕಾರ ಅಥವಾ ಸ್ಥಳೀಯ ಆಡಳಿತದಿಂದ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ

ಈ ನಿರ್ಧಾರದಿಂದ ತಮಿಳು ಚಿತ್ರರಂಗಕ್ಕೆ ಉತ್ತೇಜನ ಸಿಗುವ ನಿರೀಕ್ಷೆಯಿದ್ದು, ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಇದನ್ನು ನೋಡಿ : ಬೈಕ್ ಗೆಡಿಕ್ಕಿ ಹೊಡೆದ ಬಸ್ ಮಹಿಳೆಗೆ ಗಂಭೀರ ಗಾಯ.!




