ಶಿವರಾಜ್ಕುಮಾರ್ ಮತ್ತು ನಿರ್ದೇಶಕ R Chandru ಮತ್ತೊಮ್ಮೆ ಒಂದಾಗುತ್ತಿದ್ದಾರೆ. ‘ಕಬ್ಜ’ ಬಳಿಕ ಹೊಸ ಕಥೆಯೊಂದಿಗೆ ಚಂದ್ರು ಸಿನಿಮಾ ಘೋಷಣೆ ಮಾಡಲು ಸಜ್ಜಾಗಿದ್ದಾರೆ. ಶಿವಣ್ಣನ ಮುಂಬರುವ ಚಿತ್ರಗಳ ವಿವರ ಇಲ್ಲಿದೆ.

ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಆರ್. ಚಂದ್ರು ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.‘ಕಬ್ಜ’ ಚಿತ್ರದ ಬಳಿಕ ನಿರ್ದೇಶನದಿಂದ ದೂರವಿದ್ದ R Chandru ಇದೀಗ ಹೊಸ ಕಥೆಯೊಂದಿಗೆ ಶಿವಣ್ಣ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

‘ಮೈಲಾರಿ’ ಬಳಿಕ ಮತ್ತೊಂದು ಕಾಂಬಿನೇಷನ್
ಶಿವರಾಜ್ಕುಮಾರ್ ಹಾಗೂ ಆರ್. ಚಂದ್ರು ನಡುವಿನ ಬಾಂಧವ್ಯ ಹಳೆಯದು.2010ರಲ್ಲಿ ಬಿಡುಗಡೆಯಾದ ‘ಮೈಲಾರಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಬಳಿಕ ‘ಕಬ್ಜ’ ಚಿತ್ರದಲ್ಲೂ ಶಿವಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ವರದಿಗಳ ಪ್ರಕಾರ, ಹೊಸ ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ.ಆದರೆ ಕಥೆ ಮತ್ತು ಪಾತ್ರದ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ ಇದೆ.
MUST READ : ಮನೆಯಲ್ಲಿ ನೇಣು ಬಿಗಿದುಕೊಂಡು SDRF ಸಿಪಿಐ Suicide..!!

ಶಿವಣ್ಣನ ಬ್ಯುಸಿ ಸಿನಿಮಾ ಪಟ್ಟಿ
ಶಿವರಾಜ್ಕುಮಾರ್ ಸದ್ಯ ಹಲವು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಅವರ ಮುಂಬರುವ ಚಿತ್ರಗಳು:
- ‘ಪೆದ್ದಿ’
- ‘ಜೈಲರ್ 2’
- ‘ಗುಮ್ಮಡಿ ನರಸಯ್ಯ’
- ‘ಡ್ಯಾಡ್’
- ‘666 ಆಪರೇಷನ್ ಡ್ರೀಮ್ ಥಿಯೇಟರ್’

ಪರಭಾಷೆಯಲ್ಲೂ ಶಿವಣ್ಣ ಅಬ್ಬರ
ಶಿವಣ್ಣ ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ.ಹೀಗಾಗಿ ವಿವಿಧ ರಾಜ್ಯಗಳಿಗೆ ತೆರಳಿ ನಿರಂತರವಾಗಿ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ.
ಆರ್. ಚಂದ್ರು ಮುಂದಿನ ಯೋಜನೆ
‘ಕಬ್ಜ’ ಬಳಿಕ ಆರ್. ಚಂದ್ರು ಹೊಸ ಕಥೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.ಇದೀಗ ಶಿವರಾಜ್ಕುಮಾರ್ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸುವ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
MUST WATCH : TOURIST PLACEನಲ್ಲಿ ಪುಂಡರಿಂದ ಇದೆಂಥಾ ವರ್ತನೆ- ಅರಣ್ಯ ಇಲಾಖೆ ಅಧಿಕಾರಿಗಳು ಏನ್ ಮಾಡ್ತಿದ್ದಾರೆ? | TUMAKURU |




