
ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ.
ಒಂದೇ ಕ್ಷಣದಲ್ಲಿ ನದಿಯೇ ರಾಕ್ಷಸಿಯಾಗಿ ಬದಲಾದರೆ ಹೇಗಿರಬಹುದು? ನೂರಾರು ಮನೆಗಳು, ವಾಹನಗಳು, ಜನರ ಕನಸುಗಳು ನೀರಿನಲ್ಲಿ ಕೊಚ್ಚಿಹೋದರೆ ಹೇಗಿರಬಹುದು? ಇಂತಹ ಭಯಾನಕ ದೃಶ್ಯಗಳಿಗೆ ಸಾಕ್ಷಿಯಾಗಿದೆ ನಮ್ಮ ನೆರೆಯ ರಾಷ್ಟ್ರ ನೇಪಾಳ.
ನೇಪಾಳದಲ್ಲಿ ಜಲಪ್ರಳಯ
ಹೌದು.. ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಭಾಗದ ಹಿಮಾಲಯ ಪ್ರದೇಶದಲ್ಲಿ ಭಾರೀ ಹಿಮನದಿ ಕುಸಿತ ಸಂಭವಿಸಿದ್ದು, ಸಾವಿರಾರು ಟನ್ಗಳಷ್ಟು ಹಿಮ, ಬಂಡೆಗಳು ಹಾಗೂ ಮಣ್ಣು ನದಿಗೆ ಕುಸಿದ ಪರಿಣಾಮ ಕ್ಷಣಾರ್ಧದಲ್ಲೇ ಭೀಕರ ಜಲಪ್ರಳಯ ಸೃಷ್ಟಿಯಾಗಿದೆ. ನೀರಿನ ರಭಸಕ್ಕೆ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶವಾಗಿದೆ.

ಹಲವು ಜಿಲ್ಲೆಗಳಿಗೆ ಪ್ರವಾಹದ ಹೊಡೆತ
ರಾಸುವಾ, ಟಿಮುರೆ, ಸ್ಯಾಫ್ರುಬೆಸಿ, ನುವಾಕೋಟ್ ಮತ್ತು ಧಾಡಿಂಗ್ ಸೇರಿದಂತೆ ಹಲವು ಪ್ರದೇಶಗಳು ಪ್ರವಾಹದ ಹೊಡೆತಕ್ಕೆ ತತ್ತರಿಸಿವೆ. ನೂರಾರು ಮನೆಗಳು, ವಾಹನಗಳು, ಸೇತುವೆಗಳು ಹಾಗೂ ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ.
ಹಠಾತ್ ಸಂಭವಿಸಿದ ಜಲಪ್ರಳಯದಿಂದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೂಡ ಸಮಯ ಸಿಗದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
RAED THIS : ನೇಪಾಳದಲ್ಲಿ ಜಲಪ್ರಳಯ – 300 ಭಾರತೀಯರು ಕಣ್ಮರೆ

389ಕ್ಕೂ ಹೆಚ್ಚು ಮಂದಿ ಸಾವು, 500ಕ್ಕೂ ಅಧಿಕ ಮಂದಿ ನಾಪತ್ತೆ!
ಈ ಭೀಕರ ದುರಂತದಲ್ಲಿ 389ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದವರಲ್ಲಿ ಭಾರತೀಯ ಯಾತ್ರಾರ್ಥಿಗಳು ಹಾಗೂ ವಿದೇಶಿ ಪ್ರವಾಸಿಗರೂ ಸೇರಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷಗಳು ಹಾಗೂ ಪ್ರವಾಹದ ನೀರಿನ ನಡುವೆ ಸಿಲುಕಿರುವವರನ್ನು ಪತ್ತೆಹಚ್ಚಲು ಹರಸಾಹಸ ಪಡುತ್ತಿದ್ದಾರೆ.

ಸಾವಿರಾರು ಕುಟುಂಬಗಳು ತಮ್ಮವರಿಗಾಗಿ ಕಣ್ಣೀರು
“ಹಿಮಾಲಯದ ಮಡಿಲಲ್ಲಿ ಸಂಭವಿಸಿದ ಈ ಮಹಾದುರಂತ, ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿದೆ. ಈಗ ನೇಪಾಳದಾದ್ಯಂತ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿರಾರು ಕುಟುಂಬಗಳು ತಮ್ಮವರಿಗಾಗಿ ಕಣ್ಣೀರಿನಲ್ಲಿ ಕಾಯುತ್ತಿವೆ
MUST WATCH : ಗೌರಿ ಗಣೇಶ ಹಬ್ಬಕ್ಕೂ ಮುನ್ನ ಶಾಕ್ – 3 ಸಾವಿರ ಗಣೇಶ ವಿಗ್ರಹ ನಾಶಕ್ಕೆ ಆದೇಶ.!





