
BENGALURU : ಬೆಲೆ ಇಳಿಸಿದ್ದೇ ತಡ ರಾಜ್ಯದಲ್ಲಿ ಬಿಯರ್ಗೆ ಫುಲ್ ಡಿಮ್ಯಾಂಡ್! ಭರ್ಜರಿ ಮಾರಾಟ ಇದೇ ಕಾರಣ
ಕರ್ನಾಟಕದಲ್ಲಿ ಮದ್ಯ ಮಾರಾಟದ ಟ್ರೆಂಡ್ ಬದಲಾಗ್ತಿದೆಯಾ ಅನ್ನೋ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ಬಿಯರ್ ಮಾರಾಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇಕಡಾ 50ರಷ್ಟು ಏರಿಕೆ ದಾಖಲಾಗಿದೆ.

ಶೇಕಡಾ 49.69ರಷ್ಟು ಏರಿಕೆ!
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಹಿಂದಿನ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 84.63 ಲಕ್ಷ ಕೇಸ್ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ಬಾರಿ ಅದು 126.68 ಲಕ್ಷ ಕೇಸ್ ಬಾಕ್ಸ್ಗಳಿಗೆ ಏರಿಕೆಯಾಗಿದೆ. ಅಂದ್ರೆ ಮೂರು ತಿಂಗಳ ಅವಧಿಯಲ್ಲೇ 42.05 ಲಕ್ಷ ಕೇಸ್ಗಳಷ್ಟು ಹೆಚ್ಚುವರಿ ಬಿಯರ್ ಮಾರಾಟವಾಗಿದ್ದು, ಶೇಕಡಾ 49.69ರಷ್ಟು ಏರಿಕೆ ದಾಖಲಾಗಿದೆ.

ಹೆಚ್ಚುವರಿ ಆದಾಯ ಸಂಗ್ರಹ
ಇನ್ನು ಒಟ್ಟಾರೆ ಅಬಕಾರಿ ರಾಜಸ್ವ ಸಂಗ್ರಹದಲ್ಲೂ ಏರಿಕೆ ಕಂಡುಬಂದಿದ್ದು, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಸರ್ಕಾರದ ಖಜಾನೆಗೆ 11 ಸಾವಿರದ 595.88 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಹಿಂದಿನ ಸಾಲಿನ ಇದೇ ಅವಧಿಗೆ ಹೋಲಿಸಿದರೆ 1,291.94 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸಂಗ್ರಹವಾಗಿದ್ದು, ಶೇಕಡಾ 12.54ರಷ್ಟು ಪ್ರಗತಿ ದಾಖಲಾಗಿದೆ ಎನ್ನಲಾಗಿದೆ.
READ THIS : ಮದ್ಯ ಮಾರಾಟದಲ್ಲಿ ದಾಖಲೆ – ಅಬಕಾರಿ ಇಲಾಖೆಗೆ ಬಂದ ಆದಾಯ ಎಷ್ಟು?
ಬಿಯರ್ ಮಾರಾಟದಿಂದ ಬಂದ ಆದಾಯವೂ ಏರಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,234.50 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಈ ಬಾರಿ 1,463.07 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

BENGALURU – ಬಿಯರ್ ಬೇಡಿಕೆ ಹೆಚ್ಚಳಕ್ಕೆ ಕಾರಣ ಏನು?
ಹಾಗಾದ್ರೆ ರಾಜ್ಯದಲ್ಲಿ ಬಿಯರ್ ಮಾರಾಟ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದ್ದೇಕೆ ಅನ್ನೋ ಪ್ರಶ್ನೆ ಮೂಡಿದೆ. ಬಿಯರ್ನ ಕೆಲವು ಬ್ರ್ಯಾಂಡ್ಗಳ ಬೆಲೆ ಬದಲಾವಣೆ, ಹವಾಮಾನ ಸೇರಿದಂತೆ ಗ್ರಾಹಕರ ಆಯ್ಕೆಯಲ್ಲಿನ ಬದಲಾವಣೆಗಳು ಮಾರಾಟ ಏರಿಕೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದ್ರೆ ಮಾರಾಟ ಏರಿಕೆಗೆ ನಿರ್ದಿಷ್ಟವಾಗಿ ಇದೇ ಕಾರಣ ಎಂದು ಅಧಿಕೃತವಾಗಿ ದೃಢಪಟ್ಟಿಲ್ಲ.
MUST WATCH : ಮೆಡಲ್ ಗೆದ್ದವರಿಗೆ ಬಂಪರ್ ಬಹುಮಾನ ಸಿಎಂ ಡಿಕೆಶಿಗೆ ಥ್ಯಾಂಕ್ಸ್ ಎಂದ ಪೂವಮ್ಮ





