Bengaluru : ಮದ್ಯ ಮಾರಾಟದಲ್ಲಿ ಹೊಸ ದಾಖಲೆ – ಕೇವಲ 30 ದಿನಗಳಲ್ಲಿ ಸರ್ಕಾರದ ಖಜಾನೆಗೆ ಹರಿದು ಬಂದ ಆದಾಯ ಎಷ್ಟು ಗೊತ್ತಾ?

Bengaluru : ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿಯಾದ ಬಳಿಕ ಮದ್ಯ ಮಾರಾಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದ್ದು, ಕೇವಲ 30 ದಿನಗಳ ಅವಧಿಯಲ್ಲಿ ಸರ್ಕಾರದ ಖಜಾನೆಗೆ 3 ಸಾವಿರ 509 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಅಬಕಾರಿ ಇಲಾಖೆಯ ಅಂಕಿ-ಅಂಶಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ.
ಮದ್ಯ ಮಾರಾಟದಲ್ಲಿ ಹಳೆ ದಾಖಲೆಗಳೆಲ್ಲ ಉಡೀಸ್
ಆಲ್ಕೋಹಾಲ್ ಇನ್ ಬೆವರೇಜ್ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಮದ್ಯ ಮಾರಾಟದಿಂದ ಬರುವ ಆದಾಯದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬಂದಿದೆ.
ಹೊಸ ತೆರಿಗೆ ನೀತಿ ಜಾರಿಯಾದ ಮೊದಲ ತಿಂಗಳಲ್ಲೇ ಸರ್ಕಾರಕ್ಕೆ ಭರ್ಜರಿ ಆದಾಯ ಲಭಿಸಿದೆ.
ಇದನ್ನು ಓದಿ : ಮದ್ಯ ಮಾರಾಟದ ಅಬ್ಬರ – 13 ವರ್ಷದ ದಾಖಲೆ ಉಡೀಸ್, ಆದಾಯ ಎಷ್ಟು?

ಮದ್ಯ ಮಾರಾಟದಲ್ಲಿ ಶೇ.20ರಷ್ಟು ಏರಿಕೆ
ಮದ್ಯ ಮಾರಾಟಗಾರರ ಪ್ರಕಾರ, ಕಳೆದ 30 ದಿನಗಳಲ್ಲಿ ಮದ್ಯ ವ್ಯಾಪಾರದಲ್ಲಿ ಸುಮಾರು ಶೇ.20ರಷ್ಟು ಹೆಚ್ಚಳ ದಾಖಲಾಗಿದೆ. ಕೆಲವು ಕಡಿಮೆ ಬೆಲೆಯ ಬ್ರಾಂಡ್ಗಳ ಬೆಲೆ ಏರಿಕೆಯಾಗಿದ್ದರೂ, ಅದರ ಪರಿಣಾಮ ಮಾರಾಟದ ಮೇಲೆ ಕಂಡುಬಂದಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಬಿಯರ್ ಮಾರಾಟದಲ್ಲಿ ಭಾರೀ ಏರಿಕೆ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟ ಶೇ.59.4ರಷ್ಟು ಹೆಚ್ಚಳ ಕಂಡಿದ್ದು, ಒಟ್ಟು 403.1 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಹೊಸ ಅಬಕಾರಿ ನೀತಿಯಿಂದ ಕೋಟಿ ಕೋಟಿ ಹಣ ಹರಿದು ಬಂತಾ?
ಇಂಡಿಯನ್ ಮೇಡ್ ಲಿಕರ್ ಅಥವಾ ಐಎಂಎಲ್ ವಿಭಾಗದಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 443.5 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿದ್ದು, ಮದ್ಯ ಖರೀದಿಯಲ್ಲಿ ಗ್ರಾಹಕರ ಆಸಕ್ತಿ ಹೆಚ್ಚಿರುವುದು ಸ್ಪಷ್ಟವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ₹3,022 ಕೋಟಿ ಮೌಲ್ಯದ ಮದ್ಯ ಮಾರಾಟ ದಾಖಲಾಗಿದ್ದರೆ, ಈ ವರ್ಷ ಅದು ₹3,509 ಕೋಟಿಗೆ ಏರಿಕೆಯಾಗಿದೆ.

ಒಟ್ಟಾರೆ ಹೊಸ ಅಬಕಾರಿ ನೀತಿ ಜಾರಿಯಾದ ಮೊದಲ ತಿಂಗಳಲ್ಲೇ ರಾಜ್ಯ ಸರ್ಕಾರಕ್ಕೆ ಗಣನೀಯ ಆದಾಯ ತಂದುಕೊಟ್ಟಿದ್ದು, ಮದ್ಯ ಮಾರಾಟ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ಇದನ್ನು ನೋಡಿ : ಭ್ರಷ್ಟಚಾರದ ಬಗ್ಗೆ ಮಾತನಾಡಲು HDKಕೆಗೆ ನೈತಿಕತೆ ಇಲ್ಲ- CHELUVARAYASWAMY ಕೆಂಡಾಮಂಡಲ





