
BENGALURU : ಸಿಲಿಂಡರ್ ಸ್ಫೋಟಗೊಂಡು ತಾಯಿ, 3 ವರ್ಷದ ಮಗು ಸಾವು – ನಾಲ್ವರಿಗೆ ಗಂಭೀರ ಗಾಯ!
ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್ನಲ್ಲಿ ಸಂಭವಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಾಯಿ ಹಾಗೂ ಮೂರು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ತಾಯಿ, ಮಗು ಸಾವು!
ಮೃತರನ್ನು ರಾಯಚೂರು ಮೂಲದ ಲಕ್ಷ್ಮಮ್ಮ ಹಾಗೂ ಅವರ ಮೂರು ವರ್ಷದ ಅವಳಿ ಮಕ್ಕಳಲ್ಲಿ ಒಂದು ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಕುಟುಂಬದ ಮುಖ್ಯಸ್ಥ ಕರಿಲಿಂಗಪ್ಪ ಹಾಗೂ ಉಳಿದ ಮಕ್ಕಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
READ THIS : ಕರೆಂಟ್ ಕಟ್ ಮಾಡಿದಕ್ಕೆ ಜೆಸ್ಕಾಂ ಕಚೇರಿಗೆ ಬೆಂಕಿ..!!

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ
ರಾಯಚೂರು ಮೂಲದ ಕರಿಲಿಂಗಪ್ಪ ಕುಟುಂಬ ಕಳೆದ 25 ವರ್ಷಗಳಿಂದ ವಿನಾಯಕ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದ್ರೆ ನಿನ್ನೆ ಬೆಳಗ್ಗೆ ಸಂಭವಿಸಿದ ಸ್ಫೋಟ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡಿದೆ.
BENGALURU – ಸ್ಟೌವ್ ಹಚ್ಚಿದ ತಕ್ಷಣ ಸ್ಫೋಟ
ನಿನ್ನೆ ಬೆಳಿಗ್ಗೆ ಸುಮಾರು 6:20ರ ವೇಳೆಗೆ ಮನೆಯಲ್ಲಿ ಬಾಗಿಲು ತೆಗೆದು ಅಡುಗೆ ಮಾಡಲು ಸ್ಟೌವ್ ಹಚ್ಚಿದ ತಕ್ಷಣವೇ ಈ ಸ್ಫೋಟ ಸಂಭವಿಸಿದೆ. ಕಳೆದ ಮೂರು ದಿನಗಳಿಂದ ಗ್ಯಾಸ್ ಸಿಲಿಂಡರ್ನಲ್ಲಿ ಅನಿಲ ಸೋರಿಕೆಯಾಗುತ್ತಿತ್ತು ಎನ್ನಲಾಗಿದ್ದು, ಅದೇ ಈ ಭೀಕರ ಅವಘಡಕ್ಕೆ ಕಾರಣವಾಗಿದೆ.

MUST WATCH : ವಿಭೂತಿ–ನಾಮ ಹಾಕೊಂಡ್ರೆ ಹಿಂದೂ ಆಗಲ್ಲ ಡಿಕೆಶಿಗೆ ಅಶೋಕ್ ಏಕವಚನದಲ್ಲೇ ವಾಗ್ದಾಳಿ




