GBA ELECTION : How many wards are there in the Chikkapet assembly constituency?

ರಾಜಧಾನಿ ಬೆಂಗಳೂರಿನ ಸಕಲವನ್ನೂ ಒಳಗೊಂಡಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಚಿಕ್ಕಪೇಟೆ ಕ್ಷೇತ್ರ ಮಾತ್ರ. ಏಕೆಂದರೆ ಸಿಲಿಕಾನ್ ಸಿಟಿಯ ದೈನಂದಿನ ಆರ್ಥಿಕತೆ ನೆಲೆ ನಿಂತಿರುವುದೇ ಈ ಭಾಗದಲ್ಲಿ. ಹೆಸರಿಗಷ್ಟೇ ಚಿಕ್ಕಪೇಟೆ ಎನಿಸಿಕೊಂಡಿರುವ ಈ ಕ್ಷೇತ್ರದಲ್ಲಿ ವ್ಯಾಪಾರ, ವಹಿವಾಟು, ಲೆಕ್ಕಾಚಾರಗಳೆಲ್ಲವೂ ಬಹಳ ದೊಡ್ಡವೇ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 12 ವಾರ್ಡ್ಗಳಿವೆ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು- ಉದಯ್ .ಬಿ. ಗರುಡಾಚಾರ್ (ಬಿಜೆಪಿ)

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಒಟ್ಟು ಜನ ಸಂಖ್ಯೆ ಎಷ್ಟು?
- ಒಟ್ಟು ಜನಸಂಖ್ಯೆ – 2 ಲಕ್ಷದ 33 ಸಾವಿರದ 555
- ಒಟ್ಟು ಪುರುಷರ ಸಂಖ್ಯೆ- 1 ಲಕ್ಷದ 18 ಸಾವಿರದ 941
- ಒಟ್ಟು ಹೆಂಗಸರ ಸಂಖ್ಯೆ – 1 ಲಕ್ಷದ 14 ಸಾವಿರದ 616

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬರುವ 12 ವಾರ್ಡ್ಗಳಾವುವು?
- ಸಿಲ್ವರ್ ಜುಬಿಲಿ ಪಾರ್ಕ್ ವಾರ್ಡ್
- ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್
- ಡಿ.ವಿ. ಗುಂಡಪ್ಪ ವಾರ್ಡ್
- ಹೊಂಬೇಗೌಡ ನಗರ
- ಸೋಮೇಶ್ವರ ನಗರ
- ಬಿಎಚ್ಇಎಲ್ ವಾರ್ಡ್
- ಕನಕನಪಾಳ್ಯ
- ವೆಂಕಟ ರೆಡ್ಡಿ ನಗರ
- ಅಶೋಕ ಪಿಲ್ಲರ್
- ವಿ.ವಿ. ಪುರಂ
- ಸುಂಕೇನಹಳ್ಳಿ
- ದೇವರಾಜ್ ಅರಸು ವಾರ್ಡ್
ಇದನ್ನು ಓದಿ : GBA ELECTION : ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಏಷ್ಟು ವಾರ್ಡ್ಗಳಿವೆ?

ವಾರ್ಡ್ ವಾರು ಜನಸಂಖ್ಯೆ
| ವಾರ್ಡ್ | ಒಟ್ಟು ಜನಸಂಖ್ಯೆ | ಗಂಡಸರು | ಹೆಂಗಸರು | ಮೀಸಲಾತಿ ಕ್ಷೇತ್ರ |
|---|---|---|---|---|
| ಸಿಲ್ವರ್ ಜುಬಿಲಿ ಪಾರ್ಕ್ ವಾರ್ಡ್ | 18,858 | 9,562 | 9,176 | ಅನುಸೂಚಿತ ಜಾತಿ ಮಹಿಳೆ |
| ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ | 18,905 | 9,868 | 9,092 | ಸಾಮಾನ್ಯ ಮಹಿಳೆ |
| ಡಿ.ವಿ. ಗುಂಡಪ್ಪ ವಾರ್ಡ್ | 20,279 | 10,418 | 9,986 | ಸಾಮಾನ್ಯ |
| ಹೊಂಬೇಗೌಡ ನಗರ | 18,866 | 9,795 | 9,011 | ಸಾಮಾನ್ಯ |
| ಸೋಮೇಶ್ವರ ನಗರ | 18,863 | 9,580 | 9,243 | ಸಾಮಾನ್ಯ ಮಹಿಳೆ |
| ಬಿಎಚ್ಇಎಲ್ ವಾರ್ಡ್ | 19,336 | 9,975 | 9,361 | ಹಿಂದುಳಿದ ವರ್ಗದ ‘ಅ’ |
| ಕನಕನಪಾಳ್ಯ | 20,054 | 10,042 | 10,053 | ಹಿಂದುಳಿದ ವರ್ಗದ ‘ಅ’ |
| ವೆಂಕಟ ರೆಡ್ಡಿ ನಗರ | 18,888 | 9,496 | 9,392 | ಸಾಮಾನ್ಯ |
| ಅಶೋಕ ಪಿಲ್ಲರ್ | 18,989 | 9,563 | 9,426 | ಸಾಮಾನ್ಯ |
| ವಿ.ವಿ. ಪುರಂ | 19,813 | 9,965 | 9,848 | ಸಾಮಾನ್ಯ ಮಹಿಳೆ |
| ಸುಂಕೇನಹಳ್ಳಿ | 21,179 | 10,743 | 10,743 | ಸಾಮಾನ್ಯ ಮಹಿಳೆ |
| ದೇವರಾಜ್ ಅರಸು ವಾರ್ಡ್ | 19,525 | 9,934 | 9,592 | ಸಾಮಾನ್ಯ |
ಈ ವಾರ್ಡ್ಗಳನ್ನು ಡಿ.ವಿ. ಗುಂಡಪ್ಪ ವಾರ್ಡ್ ಎಂದು ಹೆಸರು ಬದಲಾವಣೆ
ಈ ವಾರ್ಡನ್ನು ಈ ವರ್ಷ ಜಿಬಿಎ ಡಿ.ವಿ. ಗುಂಡಪ್ಪ ವಾರ್ಡ್ ಎಂದು ಹೆಸರು ಬದಲಾಯಿಸಿದೆ.
ಅಶೋಕ ಪಿಲ್ಲರ್ ಹೊಸದಾಗಿ ಸೇರ್ಪಡೆಯಾಗಿದೆ
ವೆಂಕಟರೆಡ್ಡಿ ನಗರ = ಮರು ವಿಗಂಡಣೆ ಆಗಿದೆ
ದೇವರಾಜ್ ಅರಸು ವಾರ್ಡ್ ಹೊಸ ಸೇರ್ಪಡೆ

ಇದನ್ನು ನೋಡಿ : ಬೆಂಗಳೂರಿನ CHIKKAPETE WARD ಕಂಪ್ಲೀಟ್ DETAILS – GBA ELECTION EXCLUSIVE UPDATE




