RRB Recruitment : ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 6,565 ತಂತ್ರಜ್ಞ ಹುದ್ದೆಗಳ ನೇಮಕಾತಿ

ರೈಲ್ವೆ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ 6,565 ತಂತ್ರಜ್ಞ ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಜೂನ್ 30ರಂದು ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
6,565 ತಂತ್ರಜ್ಞ ಹುದ್ದೆಗಳ ನೇಮಕಾತಿ
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 6,565 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ವಿಭಾಗದಲ್ಲಿ 323 ಹುದ್ದೆಗಳು ಲಭ್ಯವಿದ್ದು, ಉಳಿದ ಹುದ್ದೆಗಳನ್ನು ಟೆಕ್ನಿಷಿಯನ್ ಗ್ರೇಡ್-3 ವಿಭಾಗದಲ್ಲಿ ಭರ್ತಿ ಮಾಡಲಾಗುತ್ತದೆ.

ಜೂನ್ 30 ರಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ವಿಭಾಗದಲ್ಲಿ ಐಟಿಐ, ಬಿಎಸ್ಸಿ, ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ಅಧಿಕೃತ ಅಧಿಸೂಚನೆ ಜೂನ್ 30ರಂದು ಪ್ರಕಟವಾಗಲಿದ್ದು, ಅದೇ ದಿನದಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅಭ್ಯರ್ಥಿಗಳು ಜುಲೈ 29ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ.
ಇದನ್ನು ಓದಿ : ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ದೇಶಸೇವೆಗೆ ಸುವರ್ಣವಕಾಶ
ವಯೋಮಿತಿ ಮತ್ತು ಆಕರ್ಷಕ ವೇತನ ಶ್ರೇಣಿ:
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18ರಿಂದ 33 ವರ್ಷಗಳೊಳಗಿರಬೇಕು. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ 18ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಹುದ್ದೆಗಳಿಗೆ ತಿಂಗಳಿಗೆ 29 ಸಾವಿರ 200 ರೂಪಾಯಿಯಿಂದ ಹಾಗೂ ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ 19 ಸಾವಿರ 900 ರೂಪಾಯಿಯಿಂದ ಮೂಲ ವೇತನ ಪ್ರಾರಂಭವಾಗಲಿದೆ.

ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಹುದ್ದೆ
ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಂದರೆ ಸಿಬಿಟಿ ಹಾಗೂ ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ, ಸಿಕಂದರಾಬಾದ್, ಭುವನೇಶ್ವರ, ಪಾಟ್ನಾ, ರಾಂಚಿ, ತಿರುವನಂತಪುರಂ ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
6,565 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ
ರೈಲ್ವೆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಪ್ರಕಟವಾದ ಬಳಿಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಿದೆ.
ದೇಶದ ವಿವಿಧ ರೈಲ್ವೆ ವಲಯಗಳಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ರೈಲ್ವೆ ನೇಮಕಾತಿ ಮಂಡಳಿ ಸಿದ್ಧತೆ ನಡೆಸಿದೆ. ಜೂನ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಜುಲೈ 29 ಕೊನೆಯ ದಿನವಾಗಿರುತ್ತದೆ.

ಇದನ್ನು ನೋಡಿ : ದೇಶಾದ್ಯಂತ ನಡೆಯುತ್ತಿರೋ ನೀಟ್ ಪರೀಕ್ಷೆ – ತುಮಕೂರಿನಲ್ಲಿ ಹೇಗಿದೆ ಟೈಟ್ ಸೆಕ್ಯೂರಿಟಿ




