
DRONE PRATHAP : ಕೇಸ್ನಿಂದ ಮುಕ್ತಗೊಂಡು ಕಣ್ಣೀರಿಟ್ಟ ಪ್ರತಾಪ್!
‘ಬಿಗ್ ಬಾಸ್ ಸೀಸನ್-10’ರ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ ವಿರುದ್ಧ ನೀರಿನಲ್ಲಿ ಸೋಡಿಯಂನ ರಾಸಾಯನಿಕ ಕ್ರಿಯೆ ಪ್ರದರ್ಶಿಸಿದ ವಿಡಿಯೊಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಹಾಗೂ ಅವರ ಸ್ನೇಹಿತರು ಸೋಡಿಯಂ ಮೆಟಲ್ ಬಳಸಿ ರಾಸಾಯನಿಕ ಪ್ರಯೋಗ ನಡೆಸಿದ್ದರು ಎನ್ನಲಾಗಿತ್ತು. ಈ ಪ್ರಯೋಗದ ವಿಡಿಯೊವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ವಿಡಿಯೊ ವೈರಲ್ ಆದ ಬಳಿಕ ಪ್ರಕರಣ ದಾಖಲಾಗಿತ್ತು.

2024ರಲ್ಲಿ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2024ರ ಡಿಸೆಂಬರ್ 12ರಂದು ಎಫ್ಐಆರ್ ದಾಖಲಿಸಿ DRONE PRATHAP ಅವರನ್ನು ಬಂಧಿಸಿದ್ದರು. ಅವರ ಇಬ್ಬರು ಸ್ನೇಹಿತರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಾಲಯವು ಡ್ರೋನ್ ಪ್ರತಾಪ್ ಅವರಿಗೆ ಡಿಸೆಂಬರ್ 26ರವರೆಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
READ THIS : ಮಾಸ್ಕೋ ಮೇಲೆ ಉಕ್ರೇನ್ನಿಂದ 1,000ಕ್ಕೂ ಹೆಚ್ಚು ಡ್ರೋನ್ಗಳ ದಾಳಿ!
ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್
ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದೆ. ಪ್ರತಾಪ್ ಅವರು ಯಾವುದೇ ದುರುದ್ದೇಶಪೂರ್ವಕ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಪ್ರಕರಣದ ದಾಖಲಾತಿಗಳಲ್ಲಿ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.

ಕಣ್ಣೀರಿಟ್ಟ ಡ್ರೋನ್ ಪ್ರತಾಪ್
ಹೈಕೋರ್ಟ್ ಆದೇಶದ ಬಳಿಕ ಡ್ರೋನ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಭಾವುಕರಾಗಿದ್ದಾರೆ. “ಕೊನೆಗೂ ದೇವರು ಕಣ್ಣು ಬಿಟ್ಟ. ಕೋರ್ಟ್ನಿಂದ ಎಲ್ಲಾ ಪ್ರಕರಣಗಳ ರದ್ದು ಮಾಡಿ ನಿರಪರಾಧಿ ಅಂತ ನಾನು ನಿಂತಿದ್ದೀನಿ. ಲಾಯರ್ ಸಾಗರ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು. ಗೌರವಾನ್ವಿತ ಕೋರ್ಟ್ಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇದು ಸತ್ಯಕ್ಕೆ ಸಿಕ್ಕ ಜಯ,” ಎಂದು ಹೇಳುತ್ತಾ ಪ್ರತಾಪ್ ಕಣ್ಣೀರಿಟ್ಟಿದ್ದಾರೆ.
MUST WATCH : HDK ಅಲ್ಲೋಲ ಕಲ್ಲೋಲ ಸುದ್ದಿಗೋಷ್ಠಿ – NICE TOLL ದಾಖಲೆ ಬಿಡುಗಡೆ





