2008ರಿಂದ ಕಳೆದ ವರ್ಷದವರೆಗೂ ಪ್ರತಿ IPL ನಲ್ಲಿ ಆಡಿರುವ ಎಂ.ಎಸ್ ಧೋನಿ ಇದೇ ಮೊದಲ ಬಾರಿಗೆ ಸಂಪೂರ್ಣ ಆವೃತ್ತಿಗೆ ಗೈರಾಗಿದ್ದಾರೆ.

2008ರಿಂದ ಕಳೆದ ವರ್ಷದವರೆಗೂ ಪ್ರತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಆಡಿರುವ ದಿಗ್ಗಜ ಕ್ರಿಕಟೆಗ ಎಂ.ಎಸ್ ಧೋನಿ (MS Dhoni) ಇದೇ ಮೊದಲ ಬಾರಿಗೆ ಸಂಪೂರ್ಣ ಆವೃತ್ತಿಗೆ ಗೈರಾಗಿದ್ದಾರೆ.

2027ಕ್ಕೂ ಮುನ್ನವೇ ಧೋನಿ ನಿವೃತ್ತಿನಾ?
ಹೌದು.. ಐಪಿಎಲ್ ಆರಂಭಕ್ಕೂ ಮುನ್ನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಧೋನಿ ಆರಂಭದಲ್ಲಿ ಕೆಲ ಪಂದ್ಯಗಳಿಗೆ ಮಾತ್ರ ಗೈರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಅಭ್ಯಾಸದ ವೇಳೆ ಮತ್ತೆ ಗಾಯಗೊಂಡ ಹಿನ್ನೆಲೆ ಅವರು ಲೀಗ್ ಹಂತದ ಎಲ್ಲಾ 14 ಪಂದ್ಯಗಳಿಂದಲೂ ದೂರ ಉಳಿದರು. ಇದರಿಂದ ಧೋನಿ ನಿವೃತ್ತಿಯ ಚರ್ಚೆ ಜೋರಾಗಿದೆ.

ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ
ಜುಲೈನಲ್ಲಿ 45ನೇ ವಯಸ್ಸಿಗೆ ಕಾಲಿಡಲಿರುವ ಧೋನಿಯ ದೈಹಿಕ ಸ್ಥಿತಿ ಈಗಿನ ಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಅನುಕೂಲಕರವಾಗಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೀಗಾಗಿ ಮುಂದಿನ ಐಪಿಎಲ್ಗಿಂತ ಮುನ್ನವೇ ಅವರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
READ THIS : ಪಿಲ್ಲರ್ ಗುಂಡಿಗೆ ಬಿದ್ದು 9 ವರ್ಷದ ಬಾಲಕ ದುರ್ಮರಣ..!!

ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ
ಇದರ ನಡುವೆ, CSK ತಂಡದ ಪ್ರದರ್ಶನವೂ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತಂದಿದೆ. GT ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್ಕೆ 89 ರನ್ಗಳ ಭಾರೀ ಅಂತರದಿಂದ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಸತತ ಮೂರನೇ ಬಾರಿ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ತಂಡ ಕಳೆದುಕೊಂಡಿದೆ.
2024ರಲ್ಲಿ ಆರ್ಸಿಬಿ ವಿರುದ್ಧ ನಾಕೌಟ್ ಪಂದ್ಯದಲ್ಲಿ ಸೋತ ಸಿಎಸ್ಕೆ, 2025 ರಲ್ಲಿ ಲೀಗ್ನಲ್ಲಿ ಕೇವಲ 4 ಪಂದ್ಯ ಗೆದ್ದು ಹೊರಬಿದ್ದಿತ್ತು. ಈ ಬಾರಿ ಸತತ ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಎದುರಿಸಿದ ಸಿಎಸ್ಕೆ ಲೀಗ್ನಲ್ಲೇ ಹೊರನಡೆದಿದೆ.

MUST WATCH : GUBBI JDS ಮುಖಂಡನಿಗೆ HONEY ತಿನ್ನಿಸಲು ಯತ್ನಿಸಿದ್ರಾ ಶಾಸಕ S.R.SRINIVAS




