ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ Hubballi ವಿಜಯನಗರದಲ್ಲಿ ನಡೆದಿದೆ.

Hubballi ಯ ವಿಜಯನಗರ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ಬಾಲಾಜಿ ದುರ್ಮರಣ ಹೊಂದಿದ್ದಾನೆ. ಕೇಶ್ವಾಪುರದ ಆಜಾದ್ ನಗರ ನಿವಾಸಿಯಾಗಿದ್ದ ಬಾಲಾಜಿ ತನ್ನ ಸ್ನೇಹಿತರೊಂದಿಗೆ ಆಟವಾಡಲು ವಿಜಯನಗರಕ್ಕೆ ಬಂದಿದ್ದ ವೇಳೆ ಈ ದುರಂತ ನಡೆದಿದೆ.
ಮಾಹಿತಿಯ ಪ್ರಕಾರ, ಆಟವಾಡುತ್ತಿದ್ದ ಬಾಲಕ ಕಾಂಪೌಂಡ್ ಒಳಗೆ ಬಿದ್ದಿದ್ದ ತೆಂಗಿನಕಾಯಿ ತೆಗೆದುಕೊಳ್ಳಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಪಿಲ್ಲರ್ ಹಾಕಲು ತೋಡಿದ್ದ ಆಳವಾದ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಗುಂಡಿಯಲ್ಲಿ ನೀರು ಇದ್ದುದರಿಂದ ಬಾಲಕ ಹೊರಬರಲು ಸಾಧ್ಯವಾಗದೇ ಮುಳುಗಿ ಸಾವನ್ನಪ್ಪಿದ್ದಾನೆ.
MUST READ : Dina Bhavishaya : ದಿನ ಭವಿಷ್ಯ 21 ಮೇ 2026..
ಘಟನೆ ವೇಳೆ ಜೊತೆಗಿದ್ದ ಇಬ್ಬರು ಮಕ್ಕಳು ಭಯದಿಂದ ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ನಂತರ ಬಾಲಕ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ಬಾಲಕನ ಶವವನ್ನು ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
MUST WATCH : ಭೂ ಸ್ವಾಧೀನ ವಿರೋಧಿಸಿ ರೈತರು ಪ್ರೊಟೆಸ್ಟ್ ಜೂನ್ 5ಕ್ಕೆ ವಿಧಾನಸೌಧ ಮುತ್ತಿಗೆಗೆ ಕರೆ




