ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡ ಪೋಸ್ಟ್ ವೈರಲ್.!

Actor Darshan ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಡುವೆಯೇ ಅವರ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ವಿಜಯಲಕ್ಷ್ಮಿ ದರ್ಶನ್ ಕ್ರಿಪ್ಟಿಕ್ ಪೋಸ್ಟ್
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರದ ವಿಜಯಲಕ್ಷ್ಮಿ, ಈ ಬಾರಿ ಹಂಚಿಕೊಂಡಿರುವ ಒಂದು ಸಾಲಿನ ಸಂದೇಶ ನೆಟ್ಟಿಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ನಟ ದರ್ಶನ್ಗೆ ಬಿಗ್ ಶಾಕ್

ವೈರಲ್ ಆಗಿರುವ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಏನಿದೆ?
“ಪಡೆದುಕೊಂಡ ಮೇಲೆ, ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ” ಎಂಬ ಸಂದೇಶವನ್ನು ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಮಾಡಲಾಗಿದೆ ಎಂಬ ಬಗ್ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಚರ್ಚೆ ಆರಂಭಿಸಿದ್ದಾರೆ.
ನಟ ಧನ್ವೀರ್ ಗೌಡ ಜೊತೆ ಮನಸ್ತಾಪವೇ?
ಇನ್ನು ಕೆಲವರು ಈ ಪೋಸ್ಟ್ ನಟ ಧನ್ವೀರ್ ಗೌಡ ಅವರನ್ನು ಉದ್ದೇಶಿಸಿರಬಹುದು ಎಂಬ ಊಹಾಪೋಹಗಳನ್ನು ವ್ಯಕ್ತಪಡಿಸುತ್ತಿದ್ದು, ದರ್ಶನ್ ಕುಟುಂಬದೊಂದಿಗೆ ಮನಸ್ತಾಪವಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಇಲ್ಲ. ಹೀಗಾಗಿ ವಿಜಯಲಕ್ಷ್ಮಿ ಅವರ ಈ ಕ್ರಿಪ್ಟಿಕ್ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮತ್ತು ಊಹಾಪೋಹಗಳಿಗೆ ಮಾತ್ರ ಸೀಮಿತವಾಗಿದೆ.
MUST WATCH : TEMPO ಡಿಕ್ಕಿ ಹೊಡೆದು ಸರಣಿ ಅಪಘಾ* – ಚಾಲಕ ಗಂಭೀರ, 13 ಮಂದಿಗೆ ಗಾಯ




