ಎಸ್ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವಿಎಗೆ ಅಪಘಾತ..!

SIR ಪ್ರಕ್ರಿಯೆ ಮಾಡಲು ತೆರಳುತ್ತಿದ್ದ ವೇಳೆ ವಿಲೇಜ್ ಅಕೌಂಟ್ಟೆಂಟ್ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ವಿಲೇಜ್ ಅಕೌಂಟೆಂಟ್ ಭುವನಾ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತುಮಕೂರು ತಾಲೂಕು ಗೂಳೂರು ಬಳಿ ನಡೆದಿದೆ.
ಎಸ್ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವಿಎಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ
ತುಮಕೂರು ತಾಲೂಕಿನ ಹೊಳಕಲ್ಲು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಭುವನಾ ಅವರನ್ನು ಗುಳೂರು ಹೋಬಳಿಯಲ್ಲಿ ಎಸ್ಐಆರ್ ಮನೆ-ಮನೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಇನ್ನು ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಭುವನಾ ಅವರಿಗೆ ತಲೆಗೆ ಹಾಗೂ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ನೆಲಮಂಗಲ ತಾಲೂಕಿನ ಟಿ. ಬೇಗೂರು ನಿವಾಸಿಯಾಗಿರುವ ಭುವನಾ, ಇಂದು ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟಿದ್ರು. ಗುಳೂರಿನ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಲಾರಿ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.
ಜಿಲ್ಲಾಧಿಕಾರಿಗಳ ವಿರುದ್ಧ ಸಂಬಂಧಿಕರು, ವಿಎಗಳ ಆಕ್ರೋಶ
ಇನ್ನು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದು, ನಮ್ಮ ಮಗಳು ಕ್ಷೇಮವಾಗಿ ಮನೆಗೆ ಬರಬೇಕು. ಹೀಗಾಗೋದಿಕ್ಕೆ ಅಧಿಕಾರಿಗಳೇ ಕಾರಣ, ರಾತ್ರಿ 10 ಗಂಟೆವರೆಗೂ ಮೀಟಿಂಗ್ ಮಾಡ್ತಾರೆ. ಮತ್ತೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಕರೀತಾರೆ. ನಿಮಗೆ ರ್ಯಾಕಿಂಗ್ ಬೇಕು, ಪ್ರಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಾ ಎಂದು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇದನ್ನೂ ಓದಿ : ನಟ Darshan ಜೈಲಿನಲ್ಲಿರುವಾಗಲೇ ಪತ್ನಿ ವಿಜಯಲಕ್ಷ್ಮಿ ಅಚ್ಚರಿ ಪೋಸ್ಟ್

ಇನ್ನು ಈ ಅಪಘಾತವನ್ನು ಖಂಡಿಸಿ ಸಿದ್ದಗಂಗಾ ಆಸ್ಪತ್ರೆ ಎದುರು ಗ್ರಾಮ ಲೆಕ್ಕಾಧಿಕಾರಿಗಳು ಜಮಾಯಿಸಿದ್ದು, ಜಿಲ್ಲಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
MUST WATCH : SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಭೀಕರ ಅಪಘಾ* ವಿಎ ಸಾವು ಬದುಕಿನ ನಡುವೆ ಹೋರಾಟ




