ಬೈಕ್ ಹಾಗೂ ಲಾರಿ ನಡುವೆ ಭೀಕರ Accident : ಅಣ್ಣ – ತಂಗಿ ದಾರುಣ ಸಾವು

ತುಮಕೂರಿನಲ್ಲಿ ಬೈಕ್ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಣ್ಣ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಎನ್.ಡಿ.ಎಸ್. ಸಮೀಪ ನೆನ್ನೆ ರಾತ್ರಿ ಈ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನು ಓದಿ : ತುಮಕೂರು- ಕುಣಿಗಲ್ ರಸ್ತೆಯಲ್ಲಿ ಭೀಕರ Accident – ಬೈಕ್ ಸವಾರರು ಸಾವು

ಅಣ್ಣ- ತಂಗಿ ದಾರುಣ ಸಾವು!
ಮೃತರನ್ನು ತುಮಕೂರು ತಾಲೂಕಿನ ಅಮೃತಗಿರಿ ಗ್ರಾಮದ ಶ್ರೀನಿವಾಸ್ (25) ಹಾಗೂ ಅವರ ಸಹೋದರಿ ನಯನ (23) ಎಂದು ಗುರುತಿಸಲಾಗಿದೆ. ಅಣ್ಣ ತಂಗಿ ಒಂದೇ ಬೈಕ್ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

Accident – FIR ದಾಖಲು
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿಲಾಗಿದೆ. ಘಟನೆ ಸಂಬಂಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನು ನೋಡಿ : ಮಠಕ್ಕೆ ನುಗ್ಗಿ ಶ್ರೀಗಳ ಮೇಲೆ ಹಲ್ಲೆ – ಮಠದ ಜಾಗದ ವಿಚಾರಕ್ಕೆ ಗಲಾಟೆ ಆರೋಪ




