Tumkur | ರೀಲ್ಸ್ ಹುಚ್ಚಾಟ – ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ!

ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಲು ಮತ್ತು ಲೈಕ್ಗಳನ್ನು ಪಡೆಯುವ ಸಲುವಾಗಿ ಯುವಕರು ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರವ ಘಟನೆ ಇತ್ತೀಚಿಗೆ ಹೆಚ್ಚಾಗ್ತಿದೆ. ಹೌದು ಇಂತಹದ್ದೇ ಘಟನೆಯೊಂದು Tumkur ನಲ್ಲಿ ನಡೆದಿದೆ.

ಬೆಟ್ಟದಿಂದ ಬಿದ್ದ ಉಪನ್ಯಾಸಕ!
ರೀಲ್ಸ್ ಮಾಡಲು ಹೋಗಿ ಉಪನ್ಯಾಸಕರೊಬ್ಬರು ದೇವರಾಯನದುರ್ಗ ಬೆಟ್ಟದಿಂದ ಬಿದ್ದು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗಾಯಗೊಂಡವರನ್ನು ತುಮಕೂರು ತಾಲೂಕಿನ ಬಳ್ಳಾಪುರ ಗ್ರಾಮದ ಶಿವಪ್ರಸಾದ್ ಎನ್ನಲಾಗಿದೆ.
ಇದನ್ನು ಓದಿ : ದೇವರಾಯನದುರ್ಗ, ನಾಮದ ಚಿಲುಮೆ, ಮಂದಾರಗಿರಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ

ಆಗಿದ್ದೇನು?
ಅರಸೀಕೆರೆಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶಿವಪ್ರಸಾದ್ ಇಂದು ಬೆಳಗ್ಗೆ ದೇವರಾಯನದುರ್ಗಕ್ಕೆ ಬಂದಿದ್ದರು. ಈ ವೇಳೆ ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಲು ಮಂದಾಗಿದ್ದಾರೆ. ರೀಲ್ಸ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಸಿದ್ದಗಂಗಾ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ
ಇನ್ನು ಗಂಭೀರವಾಗಿ ಗಾಯಗೊಂಡ ಶಿವಪ್ರಸಾದ್ನನ್ನು ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಸ್ಥಳೀಯರು ಹಾಗೂ ಇತರರು ತಕ್ಷಣವೇ ಅವರನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಸದ್ಯ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನು ನೋಡಿ : ಬಾಂಬ್ ಸ್ಫೋಟಿಸಿಕೊಂಡ ಭಗ್ನ ಪ್ರೇಮಿ ಸಾ* – ಪಾಗಲ್ ಪ್ರೇಮಿಯ ತಂದೆ ಶಾಕಿಂಗ್ ಹೇಳಿಕೆ




