Tumakuru : ಇಂಜಿನಿಯರಿಂಗ್ ವಿದ್ಯಾರ್ಥಿ ಸೂಸೈಡ್

ದಾವಣಗೆರೆ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು (Tumakuru) ನಗರದ ಉಪ್ಪಾರಹಳ್ಳಿಯ ಬಿಸಿಎಂ ಹಾಸ್ಟೆಲ್ನಲ್ಲಿ ನಡೆದಿದೆ. ಎಸ್ಐಟಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ದ, ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಮೂಲದ 25 ವರ್ಷದ ವೆಂಕಟೇಶ್ ಮೃತ ವಿದ್ಯಾರ್ಥಿಯಾಗಿದ್ದಾನೆ.

ವಿದ್ಯಾರ್ಥಿಯ ಕೊನೆಯ ಆಸೆ ಡೆತ್ ನೋಟ್ನಲ್ಲಿ ಉಲ್ಲೇಖ
ಇನ್ನು ಮೃತ ವೆಂಕಟೇಶ್ ಹಾಸ್ಟೆಲ್ ರೂಮಿನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಸಹಪಾಠಿಗಳು ಗಮನಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಇನ್ನು ವೆಂಕಟೇಶ್ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದ್ರೆ ಸಾಯುವ ಮುನ್ನ ಆತ ಪೋಷಕರಿಗೆ ಡೆತ್ ನೋಟ್ ಬರೆದಿದ್ದು, ನನ್ನದು ಒಂದೇ ಒಂದು ಆಸೆ. ನೀವು ಐದು ಜನ ಒಟ್ಟಿಗೆ ಇರಬೇಕು. ಒಬ್ಬರನ್ನೊಬ್ಬರು ಬಿಟ್ಟು ಕೊಡದೆ, ಬೇರೆಯಾಗದೆ ಹೀಗೆ ಇರಬೇಕೆಂಬುದೇ ನನ್ನ ಕೊನೆಯ ಆಸೆ. ನಿಮ್ಮ ಪ್ರೀತಿಯ ಮಗ ಎಂದು ಬರೆದಿದ್ದಾನೆ.
ಇದನ್ನು ಓದಿ : ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕನಾಗುವ ಕನಸು ಕಂಡಿದ್ದ ಯುವಕ ಆತ್ಮಹತ್ಯೆ..!!

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ
ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಎದುರಾದರೂ ಅದನ್ನು ಮೊದಲು ತನ್ನ ಕುಟುಂಬದವರು, ಸ್ನೇಹಿತರು ಅಥವಾ ಶಿಕ್ಷಕರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಅದನ್ನ ಬಿಟ್ಟು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಹಾಸ್ಟೆಲ್ ವಾರ್ಡನ್ ಹೇಳಿದ್ರು.
ವಿದ್ಯಾರ್ಥಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ಚೆನ್ನಾಗಿ ಓದಿ ಸಾಧನೆ ಮಾಡುವ ವಯಸ್ಸಿನಲ್ಲೇ ವೆಂಕಟೇಶ್ ಸಾವನ್ನಪ್ಪಿರೋದು ಕುಟುಂಬಸ್ಥರು, ಸ್ನೇಹಿತರ ದುಂಖಕ್ಕೆ ಕಾರಣವಾಗಿದೆ.

ಇದನ್ನು ನೋಡಿ : ಸರ್ಕಾರ ಬಲವಂತವಾಗಿ ಭೂಮಿ ಕಿತ್ತುಕೊಳ್ತಿದೆ – ಸಂಸದ YADUVEER WADIYAR ಹೇಳಿಕೆ




