ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗುವ ಕನಸು ಕಂಡಿದ್ದ Nelamangala ಮೂಲದ ಯುವಕ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗುವ ಕನಸು ಕಂಡಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ Nelamangala ತಾಲೂಕಿನ ತ್ಯಾಮಗೊಂಡ್ಲು ಸಮೀಪದ ಬಿದಲೂರಿನಲ್ಲಿ ನಡೆದಿದೆ. 35 ವರ್ಷದ ಮಂಜುನಾಥ್ ಮೃತ ಯುವಕನಾಗಿದ್ದು, ಸಿನಿಮಾ ಡೈರೆಕ್ಟರ್ ಆಗಬೇಕೆಂಬ ಮಹದಾಸೆಯಿಂದ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಸ್ವತಃ ವಿಡಿಯೋ ಎಡಿಟಿಂಗ್ ಮಾಡುವ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿರುವ ಮಂಜುನಾಥ್, “ಅಪ್ಪ ನನ್ನನ್ನು ಕ್ಷಮಿಸಿಬಿಡಿ. ಹೆತ್ತವರಿಗೆ ಒಳ್ಳೆಯ ಮಗನಾಗಲಿಲ್ಲ” ಎಂದು ಭಾವುಕವಾಗಿ ಉಲ್ಲೇಖಿಸಿದ್ದಾನೆ. ಅಲ್ಲದೆ, ತನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ ಎಂದು ಡೆತ್ನೋಟ್ನಲ್ಲಿ ಸ್ಪಷ್ಟವಾಗಿ ಬರೆದಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ವಾಸವಿದ್ದ ಮಂಜುನಾಥ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದನು.
MUST READ : ವಚನಾನಂದ ಶ್ರೀಗಳ ವಿರುದ್ಧ POCSO ಪ್ರಕರಣ – ಇಂದು ಹೈಕೋರ್ಟ್ನಲ್ಲಿ ಜಾಮೀನು ಭವಿಷ್ಯ ನಿರ್ಧಾರ..!!

ನಿನ್ನೆ ಸಂಜೆ ಮೊಬೈಲ್ ಫೋನ್ ಒಡೆದು ಹಾಕಿದ ಬಳಿಕ ಡೆತ್ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊತ್ತಿದ್ದ ಯುವ ಪ್ರತಿಭೆಯ ಜೀವನ ಹೀಗೆ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದೆ.
MUST WATCH : ಅಬ್ಬಬ್ಬಾ.. ಅಂಗಡಿ ಮುಂದೆ ಜನವೋ ಜನ – ಒಂದು ರೂ.ಟೀ ಶರ್ಟ್ ಗೆ ಮುಗಿಬಿದ್ದ ಜನರು | CHIKKABALLAPURA NEWS |




