ಅನಾರೋಗ್ಯದಿಂದ ಚೇತರಿಸಿಕೊಂಡ ಉಪಮುಖ್ಯಮಂತ್ರಿ G Parameshwara ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಪ್ರಕ್ರಿಯೆ ವೇಗಗೊಳಿಸಲು ಹಾಗೂ ಬಾಕಿ ಕಡತಗಳ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅನಾರೋಗ್ಯದಿಂದ ಸುಮಾರು ಒಂದು ವಾರ ವಿಶ್ರಾಂತಿ ಪಡೆದಿದ್ದ ಉಪಮುಖ್ಯಮಂತ್ರಿ G Parameshwara ಅವರು ಸೋಮವಾರ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಪರಿಶೀಲನೆ ನಡೆಸಿದ ಅವರು, ಖಾಲಿ ಹುದ್ದೆಗಳ ಭರ್ತಿ ಹಾಗೂ ಬಾಕಿ ಇರುವ ಅಧಿಕಾರಿಗಳ ಬಡ್ತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚನೆ ನೀಡಿದರು.
MUST READ : ವಚನಾನಂದ ಶ್ರೀಗಳ ವಿರುದ್ಧ POCSO ಪ್ರಕರಣ – ಇಂದು ಹೈಕೋರ್ಟ್ನಲ್ಲಿ ಜಾಮೀನು ಭವಿಷ್ಯ ನಿರ್ಧಾರ..!!

ಈಗಾಗಲೇ 232 ಗ್ರೇಡ್-2 ತಹಶೀಲ್ದಾರ್ಗಳನ್ನು ಗ್ರೇಡ್-1ಕ್ಕೆ ಬಡ್ತಿ ನೀಡಿರುವ ಅವರು, ಮುಂದಿನ ಹಂತದಲ್ಲಿ ಕಂದಾಯ ನಿರೀಕ್ಷಕರನ್ನು ಉಪ ತಹಶೀಲ್ದಾರ್ಗಳಾಗಿ ಬಡ್ತಿ ನೀಡುವ ಸಾಧ್ಯತೆ ಇದೆ. ಬಾಕಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಪರಮೇಶ್ವರ್, ತಳಮಟ್ಟದ ಅಧಿಕಾರಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಒತ್ತು ನೀಡಿದರು.
MUST WATCH : ಅಬ್ಬಬ್ಬಾ.. ಅಂಗಡಿ ಮುಂದೆ ಜನವೋ ಜನ – ಒಂದು ರೂ.ಟೀ ಶರ್ಟ್ ಗೆ ಮುಗಿಬಿದ್ದ ಜನರು | CHIKKABALLAPURA NEWS |




