ನವಿಲು ಗರಿ ಧರಿಸಿ REELS : ಸ್ಯಾಂಡಲ್ವುಡ್ ನಟ ಕಿಶನ್, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು!

ಸ್ಯಾಂಡಲ್ವುಡ್ ನಟ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿದ್ದಾರೆ. ರಾಷ್ಟ್ರಪಕ್ಷಿ ನವಿಲಿನ ಗರಿಗಳಿಂದ ಸಿದ್ಧಪಡಿಸಲಾದ ಉಡುಪನ್ನು ಧರಿಸಿ ರೀಲ್ಸ್ ಮಾಡಿರುವ ಹಿನ್ನೆಲೆಯಲ್ಲಿ, ಈ ಇಬ್ಬರು ತಾರೆಯರ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ.
ನವಿಲು ಗರಿ ಧರಿಸಿ ರೀಲ್ಸ್!
ಇತ್ತೀಚೆಗೆ ನಟ ಕಿಶನ್ ಮತ್ತು ನಟಿ ನಿವೇದಿತಾ ಗೌಡ ಅವರು ಸೋಶಿಯಲ್ ಮಿಡಿಯಾಗಳಲ್ಲಿ ಹಂಚಿಕೊಂಡಿದ್ದ REELS ಒಂದು ವಿವಾದಕ್ಕೆ ಕಾರಣವಾಗಿದೆ. ಈ ರೀಲ್ಸ್ನಲ್ಲಿ ರಾಷ್ಟ್ರಪಕ್ಷಿಯ ಗರಿಗಳನ್ನು ಉಡುಪಿಗೆ ಬಳಸಿ ಪ್ರದರ್ಶಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನು ಓದಿ : ಬುಜ್ಜಿ ಬುಡಕ್ಕೆ ಬೆಂಕಿ ಇಟ್ಟ ಇನ್ಸ್ಟಾ ರೀಲ್..!

ಕಿಶನ್, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು!
ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ಅಧಿಕೃತ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ರೀಲ್ಸ್ನಲ್ಲಿ ಕಾಣಿಸಿಕೊಂಡಿರುವ ಉಡುಪಿನಲ್ಲಿರುವ ಗರಿಗಳು ನೈಜ ನವಿಲಿನ ಗರಿಗಳೇ ಅಥವಾ ಕೃತಕವಾಗಿ ತಯಾರಿಸಿದ ವಸ್ತುವೇ ಎಂಬುದನ್ನು ಮೊದಲು ಪರಿಶೀಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸತ್ಯಾಸತ್ಯತೆ ತಿಳಿಯದೇ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದು ಮನವಿ ಮಾಡಿದ್ದಾರೆ.
ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲು ಮನವಿ
ಒಂದು ವೇಳೆ ತನಿಖೆಯಲ್ಲಿ ಬಳಸಿರುವ ಗರಿಗಳು ನೈಜ ನವಿಲಿನ ಗರಿಗಳೆಂದು ದೃಢಪಟ್ಟರೆ, ಆ ಉಡುಪುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಸದ್ಯ ಈ ದೂರು ಅರಣ್ಯ ಇಲಾಖೆಯ ಅಧಿಕಾರಿಗಳ ಕೈಸೇರಿದ್ದು, ಮುಂದಿನ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ಇದನ್ನು ನೋಡಿ : SMART CITY ಹೆಸರಲ್ಲಿ ಕಳಪೆ ಕಾಮಗಾರಿ – 3 ವರ್ಷಕ್ಕೆ ಕಳಚಿ ಬೀಳ್ತಿದೆ ಕೇಂದ್ರ ಗ್ರಂಥಾಲಯ.!

