ರಾಜೀನಾಮೆ ನೀಡಲು ಬಂದರೆ ಅಂಗೀಕಾರ ಮಾಡುತ್ತೇನೆ : ಬೆದರಿಕೆ ಹಾಕಿದ ಶಾಸಕರಿಗೆ CM ಡಿಕೆಶಿ ಎಚ್ಚರಿಕೆ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಿಕೆಗೆ ಹೈಕಮಾಂಡ್ ಕರೆ
ಮಂತ್ರಿ ಸ್ಥಾನ ಸಿಗದಕ್ಕೆ ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಬೆದರಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ CM ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಕರೆ ಮಾಡಿದೆ.
ಇದನ್ನು ಓದಿ : ಹೊಸ ಸಚಿವರ ಪಟ್ಟಿ ಬಿಡುಗಡೆ ಬೆನ್ನಲ್ಲೇ ಸಂಪುಟ ವಂಚಿತ ನಾಯಕರ ಆಕ್ರೋಶ

ರಾಜೀನಾಮೆ ನೀಡಲು ಬಂದರೆ ಅಂಗೀಕಾರ ಮಾಡುತ್ತೇನೆ
ಸಚಿವ ಸ್ಥಾನ ದೊರೆಯದ ಶಾಸಕರಿಗೆ ನಿಗಮ-ಮಂಡಳಿ ಸ್ಥಾನಗಳನ್ನು ನೀಡುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ನಡೆಸಲಾಗುವುದು. ಇದನ್ನು ಮೀರಿ ಯಾರಾದರೂ ರಾಜೀನಾಮೆ ನೀಡಿದರೆ, ಅಂತಹ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಬೆದರಿಕೆ ಹಾಕಿದ ಶಾಸಕರಿಗೆ CM ಎಚ್ಚರಿಕೆ!
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜೀನಾಮೆ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ. “ಯಾರಾದರೂ ರಾಜೀನಾಮೆ ನೀಡಿದರೆ ತಕ್ಷಣ ಅಂಗೀಕರಿಸುತ್ತೇವೆ” ಎಂದು ಹೇಳುವ ಮೂಲಕ ರಾಜೀನಾಮೆ ಬೆದರಿಕೆ ಹಾಕುತ್ತಿರುವ ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನು ನೋಡಿ : ಆ. 9 ರಿಂದ 11ರವರೆಗೆ ಜೆಡಿಎಸ್ ಪಾದಯಾತ್ರೆ – ಪಾದಯಾತ್ರೆ ಬಗ್ಗೆ ನಿಖಿಲ್ ಹೇಳಿದ್ದೇನು.?




