ಸಚಿವ ಸ್ಥಾನ ವಂಚಿತ ನಾಯಕರ ಆಕ್ರೋಶ – 15 ಕ್ಕೂ ಹೆಚ್ಚು ಶಾಸಕರಿಗೆ ಅಸಮಾಧಾನ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿಅಸಮಾಧಾನ ಆಸ್ಫೋಟಗೊಂಡಿದ್ದು 15 ಕ್ಕೂ ಹೆಚ್ಚು ಶಾಸಕರ ಆಕ್ರೋಶ ಭುಗಿಲೆದ್ದಿದೆ. ಮುಖ್ಯಮಂತ್ರಿ ಡಿಕೆಶಿ ಸಂಪುಟದಲ್ಲಿ ನಾವು ಸಚಿವಗುತ್ತೇವೆ ಎಂದುಕೊಂಡಿದ್ದ ಶಾಸಕರಿಗೆ ದೆಹಲಿಯ ಹೈಕಮಾಂಡ್ ನಾಯಕರು ಶಾಕ್ ಕೊಟ್ಟಿದ್ದಾರೆ. ಹೀಗಾಗಿ ಅಸಮಾಧಾನಿತ ಶಾಸಕರು ರಾಜೀನಾಮೆ ಪಥ ತುಳಿದಿದ್ದಾರೆ.
ಸಚಿವ ಸ್ಥಾನ ವಂಚಿತ ನಾಯಕರ ಆಕ್ರೋಶ
ಈಗಾಗಲೇ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಇನ್ನೂ ಕೆಲವು ಶಾಸಕರು ಇದೇ ರೀತಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸಂಪುಟದಲ್ಲಿ ಉಳಿದಿದ್ದ 20 ಸಚಿವ ಸ್ಥಾನಗಳ ಮೇಲೆ ಹಲವು ಶಾಸಕರು ಕಣ್ಣಿಟ್ಟಿದ್ದರು. ಆದರೆ ಎಲ್ಲರಿಗೂ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಅಸಮಾಧಾನ ಇದೀಗ ಬಹಿರಂಗವಾಗಿದೆ.
ಇದನ್ನು ಓದಿ : ಸಂಪುಟ ವಿಸ್ತರಣೆ – ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು

ಅಸಮಾಧಾನಗೊಂಡ 15 ಕ್ಕೂ ಹೆಚ್ಚು ಶಾಸಕರು ಯಾರು?
- ದಿನೇಶ್ ಗುಂಡೂರಾವ್ – ಗಾಂಧಿನಗರ
- ಟಿ.ಬಿ. ಜಯಚಂದ್ರ – ಶಿರಾ
- ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ
- ಎನ್.ವೈ. ಗೋಪಾಲಕೃಷ್ಣ – ಮೊಳಕಾಲ್ಮೂರು
- ಬೇಳೂರು ಗೋಪಾಲಕೃಷ್ಣ – ಸಾಗರ
- ತನ್ವೀರ್ ಸೇಠ್ – ನರಸಿಂಹರಾಜ
- ಸಂಗಮೇಶ್ – ಭದ್ರಾವತಿ
- ಹಂಪನಗೌಡ ಬಾದರ್ಲಿ – ಸಿಂಧನೂರು
- ಮಂಕಾಳು ವೈದ್ಯ – ಭಟ್ಕಳ
- ಪ್ರಸಾದ್ ಅಬ್ಬಯ್ಯ – ಹುಬ್ಬಳ್ಳಿ–ಧಾರವಾಡ ಪೂರ್ವ
- ಎಸ್.ಎನ್. ನಾರಾಯಣಸ್ವಾಮಿ – ಬಂಗಾರಪೇಟೆ
- ಗಾಯತ್ರಿ ಶಾಂತೇಗೌಡ – ವಿಧಾನ ಪರಿಷತ್ ಸದಸ್ಯೆ (ಎಂಎಲ್ಸಿ)
- ಕೆ.ವೈ. ನಂಜೇಗೌಡ – ಮಾಲೂರು
- ಸುಬ್ಬಾರೆಡ್ಡಿ – ಬಾಗೇಪಲ್ಲಿ

ಇದನ್ನು ನೋಡಿ : ತುಮಕೂರು ಜಿಲ್ಲೆಯ ಕೈ ಶಾಸಕರಿಗೆ ಹೈಕಮಾಂಡ್ ಗುನ್ನಾ..!- ಸಚಿವ ಸ್ಥಾನ ಸಿಗದೇ ಬೇಸರದಲ್ಲಿ ನಾಯಕರು




