
BJP ಸೇರಲು ಯತ್ನಾಳ್ ಬಿಗ್ ಡಿಮ್ಯಾಂಡ್ – ಟಾರ್ಗೆಟ್ ಯಡಿಯೂರಪ್ಪ, ವಿಜಯೇಂದ್ರ!?
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಜೆಪಿ ಸೇರ್ತಾರಾ? ಕಮಲ ಪಾಳಯಕ್ಕೆ ಮರಳಲು ಯತ್ನಾಳ್ ಸಿದ್ಧರಾಗಿದ್ದಾರಾ? ಹಾಗಿದ್ದರೆ, ಬಿಜೆಪಿ ಮುಂದೆ ಅವರು ಇಟ್ಟಿರುವ ಬೇಡಿಕೆಗಳೇನು? ರಾಜ್ಯ ರಾಜಕಾರಣದಲ್ಲಿ ಇದೀಗ ಈ ಪ್ರಶ್ನೆಗಳೇ ಚರ್ಚೆಗೆ ಗ್ರಾಸವಾಗಿವೆ. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಯತ್ನಾಳ್ ಭೇಟಿಯ ಸುದ್ದಿ, ಮತ್ತೊಂದೆಡೆ ಮಾಜಿ ಸಚಿವ ಮುರುಗೇಶ್ ನಿರಾಣಿ ಜೊತೆಗಿನ ಮಾತುಕತೆ. ಈ ಬೆಳವಣಿಗೆಗಳ ಬೆನ್ನಲ್ಲೇ ಯತ್ನಾಳ್ ಅವರ ಘರ್ ವಾಪ್ಸಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಘರ್ ವಾಪ್ಸಿ ಚರ್ಚೆ ಬೆನ್ನಲ್ಲೇ ನಿರಾಣಿ ಭೇಟಿ ಮಾಡಿದ್ದ ಯತ್ನಾಳ್
ಮೊನೆಯಷ್ಟೇ ಧಾರವಾಡದ ಪತ್ರಕರ್ತರೊಬ್ಬರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಯಾಗಿದ್ರು. ಬನ್ರೀ.. ಹಿಂದೂ ಹೃದಯ ಸಾಮ್ರಾಟ್ ಎಂದು ಯತ್ನಾಳ್ ಅವರನ್ನು ಆಹ್ವಾನಿಸಿದ್ರು. ಇದಾದ ಬಳಿಕ ಯತ್ನಾಳ್ ಮಾಜಿ ಸಚಿವ ಮುರಗೇಶ್ ನಿರಾಣಿಯನ್ನು ಭೇಟಿ ಮಾಡಿದ್ರು. ಈ ವೇಳೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡ್ಗೆ ಯನ್ನು ಭೇಟಿಯಾಗಿದ್ದಾರೆ.

ಯತ್ನಳ್ ಇಟ್ಟ ಡಿಮ್ಯಾಂಡ್ ಕೇಳಿ ನಿರಾಣಿ, ಭಾಂಡ್ಗೆ ಶಾಕ್
ಬಾಗಲಕೋಟೆಯಲ್ಲಿರುವ ನಾರಾಯಣಸಾ ಭಾಂಡಾ ಮನೆಗೆ ಯತ್ನಾಳ್, ಆಹ್ವಾನದ ಮೇರೆಗೆ ಆಗಮಿಸಿದ್ದರು. ಆವೇಳೆ, ಅಲ್ಲಿ ಮುರುಗೇಶ್ ನಿರಾಣಿ ಕೂಡಾ ಹಾಜರಿದ್ದರು. ಸುಮಾರು ಎರಡು ಗಂಟೆಗಳ ಕಾಲ ಭಾಂಡಗೆ ನಿವಾಸದಲ್ಲಿದ್ದ ನಾಯಕರು ರಾಜಕೀಯ ವೈಷಮ್ಯ ಬಿಟ್ಟು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಘರ್ ವಾಪ್ಸಿಗೆ ವೇದಿಕೆ ಸಿದ್ಧವಾಯ್ತಾ ಅನ್ನೋ ಚರ್ಚೆ ಜೋರಾಗಿದೆ. ಆದ್ರೆ ಯತ್ನಳ್ ಇಟ್ಟ ಡಿಮ್ಯಾಂಡ್ ಕೇಳಿ ನಿರಾಣಿ ಮತ್ತು ಭಾಂಡ್ಗೆ ಶಾಕ್ ಆಗಿದ್ದಾರೆಂತೆ.
READ THIS : ನಾಳೆ ವಿಧಾನ ಪರಿಷತ್ 4 ಕ್ಷೇತ್ರಗಳಲ್ಲಿ ಚುನಾವಣೆ – ಯಾರಿಗೆ ವಿಜಯದ ಮಾಲೆ?

ಯತ್ನಾಳ್ ಡಿಮ್ಯಾಂಡ್ಸ್ ಏನು?
ಆಗಿದ್ರೆ ಯತ್ನಾಳ್ ಡಿಮ್ಯಾಂಡ್ಸ್ ಏನು? ಎಂದು ನೋಡೋದಾದ್ರೆ. ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಪಕ್ಷದ ಹಿರಿಯರಿಗೆ ಗೌರವ ನೀಡಿ, ಅಧಿಕಾರ ನೀಡಬೇಕು. ಹಿಂದುತ್ವದ ಆಧಾರದಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷ ಕಟ್ಟಬೇಕು. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿ.ಎಸ್ ಯಡಿಯೂರಪ್ಪ ಮಾತಿಗೆ ಕಡಿಮೆ ಮನ್ನಣೆ ನೀಡಬಾರದು ಎಂದು ಡಿಮ್ಯಾಂಡ್ ಇಟ್ಟಿದ್ದಾರಂತೆ, ಇದನ್ನು ಕೇಳಿದ ಉಭಯ ನಾಯಕರು ಶಾಸಕಾಗಿದ್ದಾರಂತೆ.
ಹೌದು.. ಹೀಗೆ ನಾಯಕತ್ವ ಬದಲಾವಣೆಯಿಂದ ಹಿಡಿದು ಪಕ್ಷದ ಸಂಘಟನೆ, ಹಿಂದುತ್ವದ ವಿಚಾರ ಮತ್ತು ಹಿರಿಯ ನಾಯಕರಿಗೆ ಗೌರವ ನೀಡುವವರೆಗೆ ಹಲವು ಬೇಡಿಕೆಗಳನ್ನು ಯತ್ನಾಳ್ ಮುಂದಿಟ್ಟಿದ್ದಾರೆ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಯತ್ನಾಳ್ ಮತ್ತೆ ಕಮಲ ಪಾಳಯಕ್ಕೆ ಮರಳುತ್ತಾರಾ?
ಒಟ್ನಲ್ಲಿ, ಯತ್ನಾಳ್ ಅವರ ಘರ್ ವಾಪ್ಸಿ ವಿಚಾರ ಈಗ ರಾಜ್ಯ ಬಿಜೆಪಿಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಯತ್ನಾಳ್ ಅವ್ರ ಐದು ಬೇಡಿಕೆಗಳಿಗೆ ಬಿಜೆಪಿ ನಾಯಕರು ಒಪ್ಪಿಗೆ ನೀಡುತ್ತಾರಾ? ವಿಜಯೇಂದ್ರ ನಾಯಕತ್ವದ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ? ಯತ್ನಾಳ್ ಮತ್ತೆ ಕಮಲ ಪಾಳಯಕ್ಕೆ ಮರಳುತ್ತಾರಾ? ಅಥವಾ ಬಿಜೆಪಿಯೊಂದಿಗಿನ ಅವರ ಸಂಘರ್ಷ ಮುಂದುವರಿಯುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಹೈಕಮಾಂಡ್ನ ಮುಂದಿನ ನಡೆ ಉತ್ತರ ನೀಡಬೇಕಿದೆ.
MUST WATCH : ಎಸ್ಐಟಿ ಮೇಲೆ ನಂಬಿಕೆ ಇಲ್ಲಾ ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ



