
KARNATAKA POLITICS : ಸಿದ್ದು ಮೌನ.. ಕಾಂಗ್ರೆಸ್ನಲ್ಲಿ ಕೋಲಾಹಲ! ಜಮೀರ್ ಎಂಟ್ರಿ.. ಡಿಕೆಶಿಗೆ ಅಲ್ಲೂ ಬೇಸರ!?
ರಾಜ್ಯ ಕಾಂಗ್ರೆಸ್ನಲ್ಲಿ ಈಗ ಸ್ಟಿಂಗ್ ಆಪರೇಷನ್ ಸದ್ದು ಜೋರಾಗಿದೆ. ಒಂದೆಡೆ ಸ್ಟಿಂಗ್ ಆಪರೇಷನ್ ವಿವಾದ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನ ಈ ಎರಡೂ ವಿಚಾರಗಳು ಈಗ ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ʻಸ್ಟಿಂಗ್ ಆಪರೇಷನ್ʼಗೆ ಕಾಂಗ್ರೆಸ್ನಲ್ಲಿ ಕೋಲಾಹಲ
ವಸತಿ ಸಚಿವ ಜಮೀರ್ ಅಹಮದ್ ಖಾನ್ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯರನ್ನು ಮೊನ್ನೆ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ರು. ಆದರೆ ತಮ್ಮನ್ನು ಗುರಿಯಾಗಿಸಿ ಮಾಡಲಾಗಿದೆ ಅಂತಿರೋ ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿರುವುದು ರಾಜಕೀಯ ವಲಯಗಳಲ್ಲಿ ಹಾಗೂ ಕಾಂಗ್ರೆಸ್ನ ಕೆಲ ನಾಯಕರಲ್ಲಿ ಕುತೂಹಲ ಮೂಡಿಸಿದೆ.

ಸಾಲು ಸಾಲು ಸಚಿವರು ಹೋದ್ರು ಬಾಯ್ಬಿಡದ ಮಾಜಿ ಸಿಎಂ
ಇನ್ನು ಸಿದ್ದು ಭೇಟಿಯಾದ ಎಲ್ಲರಿಗೂ ಮೌನವೇ ಉತ್ತರವಾಗಿದ್ದು, ಸಿದ್ದರಾಮಯ್ಯ ಮೌನ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ. ಇದು ರಾಜ್ಯ ನಾಯಕರ ನಿದ್ದೆಗೆಡಿಸಿದೆ.
ಸಿದ್ದು ಮೌನ 2028ರ ಚುನಾವಣೆ ಇರಲಿ, ಎಂಎಲ್ಸಿ ಚುನಾವಣೆಯಲ್ಲಿ ಏಫೆಕ್ಟ್ ಹೊಡೆಯೋದು ಫಿಕ್ಸ್ ಎಂಬುದು ತಿಳಿದಿದೆ.
READ THIS : ಬಿಜೆಪಿ ಸೇರ್ತಾರಾ ಬಸನಗೌಡ ಪಾಟೀಲ್ ಯತ್ನಾಳ್?

ಸಿದ್ದು ಶಿಷ್ಯರನ್ನೇ ದಾಳವಾಗಿ ಬಳಿಸಿಕೊಂಡ ಡಿಕೆಶಿ
ಹೀಗಾಗಿ ಸಿಎಂ ಡಿಕೆಶಿ ಸಿದ್ದು ಶಿಷ್ಯರನ್ನೇ ದಾಳವಾಗಿ ಬಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ ಆಪ್ತರೊಂದಿಗೆ ಸಿದ್ದರಾಮಯ್ಯ ಮಾತನಾಡಿದ್ರೆ ಸೂಕ್ತ ಕಾರಣ ತಿಳಿಯಲಿದೆ ಎಂಬುದು ಡಿಕೆಶಿ ಪ್ಲಾನ್.
ಆದ್ರೆ ಸಿದ್ದರಾಮಯ್ಯ ಮೌನ ಯಾವ ರೀತಿಯದ್ದು ಎಂದ್ರೆ. ತಮ್ಮ ಶಿಷ್ಯ ಜಮೀರ್ ಬಳಿಯೂ ಮಾತನಾಡದೇ ಮೌನದ ಉತ್ತರವನ್ನು ವಾಪಸ್ ಕಳಿಸಿದ್ದಾರೆ. ಇದರಿಂದ ತಲೆ ಕೆಡಿಸಿಕೊಂಡ ಸಿಎಂ ಡಿಕೆಶಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನ ಕರೆಸಿಕೊಂಡು ತನಿಖೆಯ ಪ್ರಗತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಯಾವಾಗ ಮೌನ ಮುರಿಯುತ್ತಾರೆ?
ಹಾಗಾದ್ರೆ ಸಿದ್ದರಾಮಯ್ಯ ಯಾವಾಗ ಮೌನ ಮುರಿಯುತ್ತಾರೆ? ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸ್ತಾರಾ? ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ನ ಮುಂದಿನ ರಾಜಕೀಯ ನಡೆ ಮೇಲೆ ಯಾವ ಪರಿಣಾಮ ಬೀರುತ್ತೇ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

MUST WATCH : ದಸರಾ ಪ್ರಯುಕ್ತ ಟಗರಿನ ಕಾಳಗ – SSK ಸಮಾಜದಿಂದ ಆಯೋಜನೆ



