
POLITICS : ಸ್ಟಿಂಗ್ ಬಾಂಬ್ನಿಂದ ಕೈ ಪಾಳಯದಲ್ಲಿ ರಾಜಕೀಯ ಕಂಪನ!
ರಾಜ್ಯ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನ್ ಸದ್ದು ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕಾಂಗ್ರೆಸ್ ಪಾಳಯದಲ್ಲಿ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ವಿಡಿಯೋ ನಕಲಿ. ನನ್ನ ಇಮೇಜ್ ಹಾಳು ಮಾಡಲು ಸಂಚು ಅಂತ ಸಿದ್ದರಾಮಯ್ಯ ಆರೋಪಿಸಿದ್ರೆ. ಸ್ವಪಕ್ಷದವರೇ ತಂದೆಯ ರಾಜಕೀಯ ಪರಂಪರೆ ಹಾಳು ಮಾಡಲು ಸಂಚು ರೂಪಿಸಿದ್ದಾರೆ ಅಂತ ಪುತ್ರ ಯತೀಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಸ್ಟಿಂಗ್ ಬಾಂಬ್ನಿಂದ ಕೈ ಪಾಳಯದಲ್ಲಿ ರಾಜಕೀಯ ಕಂಪನ!
ಇನ್ನು ಯತೀಂದ್ರ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ನಾಯಕತ್ವದ ಮೇಲೆಯೇ ಪ್ರಶ್ನೆಗಳು ಎದ್ದಿವೆ. ಇತ್ತ ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದರಿಂದ ಈಗಾಗಲೇ ರಾಜಕೀಯವಾಗಿ ಬಿಸಿಯೇರಿದ್ದ ಕಾಂಗ್ರೆಸ್-ಜೆಡಿಎಸ್ ನಡುವಿನ ಸಂಘರ್ಷಕ್ಕೆ ಸ್ಟಿಂಗ್ ಪ್ರಕರಣ ಹೊಸ ಅಸ್ತ್ರವಾಗಿದೆ.
READ THIS : ಸ್ಟಿಂಗ್ ಆಪರೇಷನ್ ಕೇಸ್ಗೆ ಹೈಕಮಾಂಡ್ ಎಂಟ್ರಿ..!

ಸ್ಟಿಂಗ್ ಪ್ರಕರಣದಲ್ಲಿ ಹೈಕಮಾಂಡ್ ಎಂಟ್ರಿ ಬೇಡ ಎಂದ ಪರಂ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ಇತ್ತ ಡಿಸಿಎಂ ಜಿ. ಪರಮೇಶ್ವರ್ ಮಾತ್ರ ಈ ವಿಚಾರದಲ್ಲಿ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ರಾಜ್ಯದ ನಾಯಕರು ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ ಅಂತ ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ಹಿಂದಿನ ಸತ್ಯ ತನಿಖೆಯಿಂದ ಹೊರಬರುತ್ತಾ?
ಒಟ್ನಲ್ಲಿ, ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿವಾದ ಈಗ ಕಾಂಗ್ರೆಸ್ ಒಳಗಿನ ಆರೋಪ-ಪ್ರತ್ಯಾರೋಪದಿಂದ ಹಿಡಿದು ಜೆಡಿಎಸ್ನ ರಾಜಕೀಯ ವಾಗ್ದಾಳಿವರೆಗೂ ವಿಸ್ತರಿಸಿದೆ. ಒಂದು ಕಡೆ ಸಂಚಿನ ಆರೋಪ. ಮತ್ತೊಂದು ಕಡೆ ತನಿಖೆಯ ಭರವಸೆ. ಇದ್ರ ನಡುವೆ ರಾಜಕೀಯ ಲಾಭ ಪಡೆಯಲು ವಿಪಕ್ಷಗಳು ಮುಂದಾಗಿದ್ದು, ಸ್ಟಿಂಗ್ ಆಪರೇಷನ್ ಹಿಂದಿನ ಸತ್ಯ ತನಿಖೆಯಿಂದ ಹೊರಬರುತ್ತಾ? ಅಥವಾ ಈ ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

MUST WATCH : ಡಿಕೆಶಿ ಕಪಟ ನಾಟಕ CM ವಿರುದ್ಧ BYV ಕೆಂಡಾಮಂಡಲ..!



