
KARNATAKA POLITICS : ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಮುಂದಾದ ಕುಮಾರಸ್ವಾಮಿ!
ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದ್ದು, ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದೀಗ ಸಿದ್ದು ಭೇಟಿಗೂ ಮುಂದಾಗಿದ್ದಾರೆ.
ಸಿದ್ದು ವರ್ಚಸ್ಸು ಹಾಳು ಮಾಡುತ್ತಿರುವುದೇ ಕಾಂಗ್ರೆಸ್
ಹೌದು.. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಮತ ಸೆಳೆಯುವ ನಾಯಕರು ಯಾರಿದ್ದಾರೆ ಅಂತ ಪ್ರಶ್ನಿಸಿರುವ ಎಚ್ಡಿಕೆ, ಸಿದ್ದು ವರ್ಚಸ್ಸು ಹಾಳು ಮಾಡುತ್ತಿರುವುದೇ ಕಾಂಗ್ರೆಸ್ ನಾಯಕರು ಅಂತ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಪರವಾಗಿ ಮಮತೆ ಯಾಕೆ ಎಂಬ ಹೇಳಿಕೆಗೆ ಹೆಚ್ಡಿಕೆ ಸ್ಪಷ್ಟನೆ ನೀಡಿದ್ರು. ಸ್ಟಿಂಗ್ ಆಪರೇಷನ್ ಜೆಡಿಎಸ್ ರೂಪಿಸಿದ ಸಂಚಲ್ಲ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾವ ನಾಯಕರಿದ್ದಾರೆ ಓಟ್ ತರಲು. ಇವಾಗ ಅವರನ್ನು ಮನೆಯಲ್ಲಿ ಕೂರಿಸಲಾಗಿದೆ ಅಂದಿದ್ದಾರೆ.
READ THIS : ಸ್ಟಿಂಗ್ ಆಪರೇಷನ್ ಕೇಸ್ಗೆ ಹೈಕಮಾಂಡ್ ಎಂಟ್ರಿ..!
ದಳಪತಿ ಮೀಟ್ಸ್ ಸಿದ್ದು!?
ಸಿದ್ದರಾಮಯ್ಯ ಅವರ ಶಕ್ತಿ ವಿರುದ್ಧ ನಮ್ಮ ಹೋರಾಟ ಇತ್ತು. ಅಂತಹ ವ್ಯಕ್ತಿಯ ವರ್ಚಸ್ಸನ್ನು ನಾವು ಹಾಳು ಮಾಡಿಲ್ಲ, ಬದಲಾಗಿ ನೀವು ಹಾಳು ಮಾಡುತ್ತಿರುವುದು.
ಸಿದ್ದರಾಮಯ್ಯ ವರ್ಚಸ್ಸು ಮುಗಿಸಲು ಯತ್ನಿಸುತ್ತಿರುವರು ನೀವು ಎಂದು ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದ್ರು.

ಶತ್ರುವಿನ ಶತ್ರು ಮಿತ್ರ ಸೂತ್ರಕ್ಕೆ ಮುಂದಾದ HDK
ಅಲ್ದೇ ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಎಂ ಡಿಕೆ ಶಿವಕಮಾರ್, ಕೇಂದ್ರ ನಾಯಕರನ್ನು ಭೇಟಿ ಮಾಡಿ ಗಮನ ಸೆಳೆಯೋದಕ್ಕೆ ಹೋಗಿದ್ದರು.
ಇದನ್ನೇ ಮುಂದಿಟ್ಟುಕೊಂಡ ಎಚ್.ಡಿ ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ವಿಷಯಗಳನ್ನು ರಾಜಕೀಯವಾಗಿ ಪ್ರಸ್ತಾಪ ಮಾಡ್ತಿದ್ದಾರೆ.
KARNATAKA POLITICS – ಸಿದ್ದರಾಮಯ್ಯ ಭೇಟಿಗೆ ಮುಂದಾದ ಕುಮಾರಸ್ವಾಮಿ!
ಇದನ್ನೇ ಅಸ್ತ್ರ ಮಾಡಿಕೊಂಡು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಮೂಲಕ ಸಿಎಂ ಡಿಕೆಶಿವನ್ನು ರಾಜಕೀಯವಾಗಿ ಹಿಮ್ಮೆಟ್ಟಿಸಲು ದಳಪತಿ ಹೊಸ ದಾಳ ಹೆಣೆದಿದ್ದಾರೆ.
ಒಟ್ಟಾರೆ ಕುಮಾರಸ್ವಾಮಿ ಒಂದು ವೇಳೆ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ರೆ ಹೊಸ ರಾಜಕೀಯ ಧ್ರುವೀಕರಣ ಆರಂಭ ಫಿಕ್ಸ್.

MUST WATCH : ಕಾಂಗ್ರೆಸ್ನಲ್ಲಿ ಸ್ಲೀಪರ್ ಸೆಲ್ಗಳಿಲ್ಲ… ಸ್ಟಿಂಗ್ ಪಿತಾಮಹ RSSನ ಸಂಜಯ್ ಜೋಶಿ



